ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್;ಪ್ರಗತಿ ಕ್ರಿಕೆಟ್ ಅಕಾಡೆಮಿಗೆ ಜಯ; ತಾ. 24 ರಿಂದ ಪ್ಲೇ ಆಫ್ ಹಂತದ ಪಂದ್ಯ

Apr 20, 2026 - 21:59
Apr 20, 2026 - 22:13
 0  71
ಕೊಡವ ಲೆದರ್ ಬಾಲ್ ಕ್ರಿಕೆಟ್   ಲೀಗ್;ಪ್ರಗತಿ ಕ್ರಿಕೆಟ್ ಅಕಾಡೆಮಿಗೆ ಜಯ;  ತಾ. 24 ರಿಂದ ಪ್ಲೇ ಆಫ್ ಹಂತದ ಪಂದ್ಯ

ಪೊನ್ನಂಪೇಟೆ.11: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 11 ನೇ ದಿನ ಎಂ.ಟಿ.ಬಿ ರಾಯಲ್ಸ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡಮಿ ನಡುವೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಪ್ರಗತಿ ಕ್ರಿಕೆಟ್ ಅಕಾಡಮಿ ಗೆಲುವಿನೊಂದಿಗೆ ಪಂದ್ಯಾವಳಿಯಿಂದ ನಿರ್ಗಮಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟ್ ಅಕಾಡಮಿ 19.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳಿಸಿ, ಎಂ.ಟಿ.ಬಿ ರಾಯಲ್ಸ್ ಗೆ 174 ರನ್ ಗಳ ಗುರಿ ನೀಡಿತು. ಅಭಿಮನ್ಯು ದೇವಯ್ಯ 49 ಎಸೆತಗಳಲ್ಲಿ 60 ರನ್ ಗಳಿಸಿದರು. ಎಂ.ಟಿ.ಬಿ ರಾಯಲ್ಸ್ ಪರ ನೆಲ್ ದೇವಯ್ಯ 2 ವಿಕೆಟ್ ಗಳಿಸಿದರು. ಗೆಲ್ಲಲು 174 ರನ್ ಗಳ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ಗಳಿಸಿ ಸೋಲೊಪ್ಪಿಕೊಂಡಿತು.

ಸುಕ್ಕಿ 41 ಎಸೆತಗಳಲ್ಲಿ 52 ರನ್ ಗಳಿಸಿದರು. ಪ್ರಗತಿ ಕ್ರಿಕೆಟ್ ಅಕಾಡಮಿ ಪರ ಪೊನ್ನಣ್ಣ 2 ವಿಕೆಟ್ ಗಳಿಸಿದರು. ಪ್ರಗತಿ ಕ್ರಿಕೆಟ್ ಅಕಾಡಮಿಯ ಅಭಿಮನ್ಯು ದೇವಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಪ್ಲೇ ಆಫ್ ಗೆ ಅರ್ಹತೆ ಪಡೆದ ತಂಡಗಳು: 

11 ದಿನಗಳ ಕಾಲ 10 ತಂಡಗಳ ನಡುವೆ ನಡೆದ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ 4 ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆದು ಕೊಂಡಿವೆ. ಅಂಜಿಗೇರಿ ನಾಡ್, ಟೀಮ್ ಕೊಡವ ಟ್ರೈಬ್, ಕೂರ್ಗ್ ಟೈಟಾನ್ಸ್ ಮತ್ತು ಎಂ.ಟಿ. ಬಿ ರಾಯಲ್ಸ್ ತಂಡಗಳು 3 ನೇ ವರ್ಷದ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಲಿವೆ. ಪ್ಲೇ ಆಫ್ ಹಂತದ ಪಂದ್ಯಗಳು ತಾ. 24 ರಿಂದ ನಡೆಯಲಿದ್ದು, ಫೈನಲ್ ಪಂದ್ಯ ತಾ. 26 ರಂದು ನಡೆಯಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0