ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್;ಟೀಮ್ ಕೊಡವ ಟ್ರೈಬ್, ಕೂರ್ಗ್ ಯುನೈಟೆಡ್ ಗೆ ಗೆಲುವು

Apr 19, 2026 - 23:02
 0  106
ಕೊಡವ ಲೆದರ್ ಬಾಲ್ ಕ್ರಿಕೆಟ್   ಲೀಗ್;ಟೀಮ್  ಕೊಡವ ಟ್ರೈಬ್, ಕೂರ್ಗ್ ಯುನೈಟೆಡ್ ಗೆ  ಗೆಲುವು

ಪೊನ್ನಂಪೇಟೆ.11: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 10 ನೇ ದಿನದಾಟದಲ್ಲಿ ಟೀಮ್ ಕೊಡವ ಟ್ರೈಬ್ ಮತ್ತು ಕೂರ್ಗ್ ಯುನೈಟೆಡ್ ತಂಡಗಳು ಗೆಲುವು ಸಾಧಿಸಿದವು.

ತಾ.19 ರ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟ್ ಅಕಾಡಮಿ 16.2 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 95 ರನ್ ಗಳ ಅಲ್ಪ ಮೊತ್ತ ಗಳಿಸಿ, ಟೀಮ್ ಕೊಡವ ಟ್ರೈಬ್ ಗೆ 96 ರನ್ ಗಳ ಗುರಿ ನೀಡಿತು. ಆರ್ಯನ್ ಕಾವೇರಿಯಪ್ಪ 41 ಎಸೆತಗಳಲ್ಲಿ 31 ರನ್ ಗಳಿಸಿದರು. ಟೀಮ್ ಕೊಡವ ಟ್ರೈಬ್ ಪರ ಎನ್. ಸಿ. ಅಯ್ಯಪ್ಪ 3 ವಿಕೆಟ್ ಗಳಿಸಿದರು. ಗೆಲ್ಲಲು 96 ರನ್ ಗಳ ಗುರಿ ಬೆನ್ನಟ್ಟಿದ ಟೀಮ್ ಕೊಡವ ಟ್ರೈಬ್ 12.4 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿ ಗೆಲುವು ಪಡೆಯಿತು.

 ಸುರಕ್ಷ 23 ಎಸೆತಗಳಲ್ಲಿ 42 ರನ್ ಗಳಿಸಿದರು. ಪ್ರಗತಿ ಕ್ರಿಕೆಟ್ ಅಕಾಡಮಿ ಪರ ಸಜನ್ ನಂದಿರ 3 ವಿಕೆಟ್ ಗಳಿಸಿದರು. ಟೀಮ್ ಕೊಡವ ಟ್ರೈಬ್ ನ ಅಂಕುಶ್ ಬೋಪಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ಬ್ಲೇಜ್ ಬ್ರಿಗೇಡ್ ಮತ್ತು ಕೂರ್ಗ್ ಯುನೈಟೆಡ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ 20 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 187 ರನ್ ಗಳ ಉತ್ತಮ ಮೊತ್ತ ಗಳಿಸಿತು. ಮಂದಣ್ಣ 20 ಎಸೆತಗಳಲ್ಲಿ 42 ರನ್ ಗಳಿಸಿದರು. ಬ್ಲೇಜ್ ಬ್ರಿಗೇಡ್ ಪರ ಕುಟ್ಟಪ್ಪ ತಂಬುಕುತ್ತಿರ 4 ವಿಕೆಟ್ ಪಡೆದು ಗಮನ ಸೆಳೆದರು. ಗೆಲ್ಲಲು 188 ರನ್ ಗಳ ಗುರಿ ಬೆನ್ನಟ್ಟಿದ ಬ್ಲೇಜ್ ಬ್ರಿಗೇಡ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್ ಗಳಿಗೆ ಆಟ ಮುಗಿಸಿ ಸೋಲನುಭವಿಸಿತು.

 ತರಣ್ ಮಣವಟ್ಟಿರ 54 ಎಸೆತಗಳಲ್ಲಿ 56 ರನ್ ಗಳಿಸಿದರು. ಕೂರ್ಗ್ ಯುನೈಟೆಡ್ ಪರ ಸಂಜಯ್ ಮುಕ್ಕಾಟೀರ 2 ವಿಕೆಟ್ ಪಡೆದರು. ಕೂರ್ಗ್ ಯುನೈಟೆಡ್ ನ ಸಂಜಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.

ನಾಳಿನ ಪಂದ್ಯ;

ಬೆಳಗ್ಗೆ 10 ಕ್ಕೆ: ಎಂ.ಟಿ.ಬಿ ರಾಯಲ್ಸ್ V/S ಪ್ರಗತಿ ಕ್ರಿಕೆಟ್ ಅಕಾಡೆಮಿ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0