ಕೊಡವ ಒಕ್ಕಡ ಕೇರ್ಬಲಿ ನಮ್ಮೆ - 2025ರ ಲಾಂಛನ ಬಿಡುಗಡೆಗೊಳಿಸಿದ ಶಾಸಕ ಎಎಸ್ ಪೊನ್ನಣ್ಣ
admincoorgdaily

ಮಡಿಕೇರಿ: ತ ನಾಪೋಕ್ಲುವಿನಲ್ಲಿ ಆಯೋಜನೆಗೊಂಡ, ಕೊಡವ ಒಕ್ಕಡ ಕೇರ್ಬಲಿ ನಮ್ಮೆ - 2025 ರ ಲಾಂಛನ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಚೀಯಕ್ ಪೂವಂಡ ಒಕ್ಕ ರವರು ಆಯೋಜನೆಗೊಳಿಸಿದ ಈ ಕಾರ್ಯಕ್ರಮ, ನಾಪೋಕ್ಲು ಕೊಡವ ಸಮಾಜದಲ್ಲಿ ಜರುಗಿತು.
ಬಳಿಕ ಮಾತನಾಡಿದ ಮಾನ್ಯ ಶಾಸಕರು, ಇಂತಹ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಹಾಗೂ ಅದರ ಏಳಿಗೆಗೆ ತುಂಬಾ ಸಹಕಾರಿಯಾಗಿದೆ. ಹಲವು ಕಾರಣಗಳಿಂದ ನಮ್ಮ ಆಚಾರ ವಿಚಾರಗಳಿಂದ ದೂರ ಉಳಿದಿರುವ ಇಂದಿನ ಯುವಜನತೆ ಇಂತಹ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆದು ನಮ್ಮ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮುಂದೆ ಬರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಸುಜಾ ಕುಶಾಲಪ್ಪ, ಕೊಡಗು ಜಿಲ್ಲಾ ವರಿಷ್ಠಧಿಕಾರಿ ರಾಮರಾಜನ್, ಶ್ರೀ ಚೀಯಕ್‌ಪೂವಂಡ ಕುಟುಂಬದ ಅಧ್ಯಕ್ಷರು ಎಂ. ಅಪ್ಪಚ್ಚು, ಶ್ರೀ ಮುಂಡಂಡ ಸಿ.ನಾಣಯ್ಯ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರು ಮುದಂಡ ಪಿ ನಾಣಯ್ಯ, ಅಧ್ಯಕ್ಷ, ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಅಧ್ಯಕ್ಷರು ಶ್ರೀ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಕುಶಾಲಪ್ಪ, ಪಂಚಾಯಿತಿ ಸದಸ್ಯರು ಅರುಣ್ ಬೇಬ, ಸುರೇಶ್, ಕೇರ್‌ಬಲಿ ನಮ್ಮೆ ಸಮಿತಿಯ ಚೀಯಕ್‌ಪೂವಂಡ ಅಧ್ಯಕ್ಷರು ಬೋಪಣ್ಣ, ಉಪಾಧ್ಯಕ್ಷರು, ಸಮಿತಿಯ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.