ಮಾದಾಪುರದಲ್ಲಿ ಕೊಡವ ಸಮಾಜ ಭವನ ಲೋಕಾಪ೯ಣೆ, 5.50 ಎಕ್ರೆ ವಿಸ್ತಾರದಲ್ಲಿ ಸುಸಜ್ಜಿತ ಕಟ್ಟಡ; ಪ್ರಾಮಾಣಿಕತೆಯೊಂದಿಗೆ ಸಂಸ್ಕೖತಿ ಸಂರಕ್ಷಣೆಗೆ ಕೊಡವರು ವಿಶ್ವವ್ಯಾಪಿ ಹೆಸರು ವಾಸಿ;ಬಸವರಾಜ ಬೊಮ್ಮಾಯಿ ಶ್ಲಾಘನೆ

ಮಾದಾಪುರದಲ್ಲಿ ಕೊಡವ ಸಮಾಜ ಭವನ ಲೋಕಾಪ೯ಣೆ, 5.50 ಎಕ್ರೆ ವಿಸ್ತಾರದಲ್ಲಿ ಸುಸಜ್ಜಿತ ಕಟ್ಟಡ;  ಪ್ರಾಮಾಣಿಕತೆಯೊಂದಿಗೆ ಸಂಸ್ಕೖತಿ ಸಂರಕ್ಷಣೆಗೆ ಕೊಡವರು ವಿಶ್ವವ್ಯಾಪಿ ಹೆಸರು ವಾಸಿ;ಬಸವರಾಜ ಬೊಮ್ಮಾಯಿ ಶ್ಲಾಘನೆ

ಮಡಿಕೇರಿ ಮೇ 5 - ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೖತಿಯನ್ನು ಸಂರಕ್ಷಿಸಿಕೊಂಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಈ ಮೂಲಕ . ಪ್ರಪಂಚದಲ್ಲಿಯೇ ಕೊಡವರು ತನ್ನತವನ್ನು ಮೆರೆಯುತ್ತಿದ್ದಾರೆ ಎಂದು ಹಾವೇರಿ ಕ್ಷೇತ್ರದ ಸಂಸದ , ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ. ಕೊಡವರ ಪ್ರಾಮಾಣಿಕತೆ ಇಂದಿನ ಸಮಾಜದ ಅತ್ಯಗತ್ಯವಾಗಿದ್ದು, ಜಗತ್ತು ಕೂಡ ಪ್ರಾಮಾಣಿಕ ಜನರನ್ನೇ ಇಂದಿನ ದಿನಗಳಲ್ಲಿ ಹೆಚ್ಚು ಬಯಸುತ್ತಿದೆ ಎಂದೂ ಅವರು ಹೇಳಿದರು.

ಮಾದಾಪುರ ಕೊಡವ ಸಮಾಜದ ನೂತನ ಭವನ ಲೋಕಾಪ೯ಣೆ ಮಾಡಿ ಅವರು ಮಾತನಾಡಿದರು.. ಎಲ್ಲರೂ ಆಧುನೀಕತೆಯತ್ತ ನಾಗಾಲೋಟದಲ್ಲಿ ಸಾಗುತ್ತಿರುವಾಗ ಕೊಡವರು ಮಾತ್ರ ತಮ್ಮ ಹಳೇ ಸಂಸ್ಕೖತಿಯ ಬುನಾದಿಯೊಂದಿಗೆ ಆಧುನೀಕತೆಯನ್ನೂ ಅಳವಡಿಸಿಕೊಂಡು ಪ್ರಬಲ ಮತ್ತು ಶ್ರೀಮಂತ ಸಂಸ್ಕೖತಿಯನ್ನು ಹೊಂದಿದ ಜನಾಂಗವಾಗಿದ್ದಾರೆ ಎಂದು ಶ್ಲಾಘಿಸಿದ ಬಸವರಾಜ ಬೊಮ್ಮಾಯಿ ಕೊಡವರ ಈ ಜೀವನ ಕ್ರಮ ಎಲ್ಲಾ ಸಮುದಾಯಕ್ಕೂ ಮಾದರಿಯಾಗಿದೆ ಎಂದರು.

ತೀವ್ರ ರೀತಿಯಲ್ಲಿ ಬೆಳೆಯುತ್ತಾ ಸಾಗಿರುವ ನಮ್ಮ ನಾಗರೀಕತೆಯಲ್ಲಿ ಯಾವಾಗ ನಾವು ಸಂಸ್ಸೖತಿಯನ್ನೂ ಒಳಗೊಳ್ಳುತ್ತೆವೆಯೋ ಅಂಥ ಸಂದಭ೯ ನಮ್ಮ ನಾಗರೀತೆ ಎಂದಿಗೂ ನಶಿಸಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದರು. ಕೊಡಗಿನ ಅಭಿವೖದ್ದಿಗಾಗಿ ಮುಖ್ಯಮಂತ್ರಿಯಾಗಿದ್ದ ಸಂದಭ೯ ಸಾಕಷ್ಟು ಅನುದಾನ ನೀಡಿದ್ದನ್ನು ಸ್ಮರಿಸಿಕೊಂಡ ಬಸವರಾಜ ಬೊಮ್ಮಾಯಿ, ಅನುದಾನ ನೀಡಿದ್ದು ಖಂಡಿತಾ ಸಾಧನೆಯಲ್ಲ. ಕೊಡಗಿನ ಜನರು ಸಕಾ೯ರಕ್ಕೆ ನೀಡಿದ್ದ ಆಥಿ೯ಕ ಸಂಪನ್ಮೂಲವನ್ನು ಮತ್ತೆ ಕೊಡಗಿನ ಜನತೆಗೇ ನೀಡುವ ಮೂಲಕ ಪುಣ್ಯ ಸಂಪಾದನೆಯ ಅವಕಾಶ ಮಾತ್ರ ತನ್ನದಾಯಿತು. ಇದರಲ್ಲಿ ಹೆಚ್ಚುಗಾರಿಕೆಯಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದರು.

ಜಗತ್ತಿನಲ್ಲಿ ಅತ್ಯಂತ ಗುಣವಾಿರುವ ಕೖತಜ್ಞತಾ ಸ್ಮರಣೆಯು ಕೊಡವರಿಗೆ ಸಿದ್ದಿಸಿದೆ. ತಮಗೆ ನೀಡಿದ ನೆರವನ್ನು ಕೊಡವರು ಎಂದಿಗೂ ಮರೆಯುವುದಿಲ್ಲ. ಹೀಗಾಗಿಯೇ ಕೊಡವರಿಗೆ ನೀಡಿದ ನೆರವು ಸದಾ ಕೖತಜ್ಞತಾಪೂವ೯ಕವಾಗಿ ಸ್ಮರಿಸಲ್ಪಟ್ಟು, ಮತ್ತಷ್ಟು ಕೊಡುಗೆ ನೀಡಲು ಮನಸ್ಸು ಪ್ರೇರೇಪಿಸುತ್ತದೆ ಎಂದೂ ಬಸವರಾಜ ಬೊಮ್ಮಾಯಿ ನುಡಿದರು.

ಸಭಾ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮಾದಾಪುರ ಕೊಡವ ಸಮಾಜದ ಭವನಕ್ಕೆ ಸಂಸದರ ಅನುದಾನದಲ್ಲಿ 25 ಲಕ್ಷ ರು. ನೀಡುವುದಾಗಿ ಘೋಷಿಸಿ, ಇದು ಕೊಡವರಿಗೆ ಸಲ್ಲಬೇಕಾದ ಗೌರವದ ಅನುದಾನ ಎಂದರಲ್ಲದೇ, ಕೊಡವ ಸಂಸ್ಕೖತಿ ಸಂರಕ್ಷಣೆಗೆ ಈ ಭವನ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.

ತಮ್ಮ ಮೂಲ ಸಂಸ್ಕೖತಿ, ಸಂಪ್ರದಾಯ ಸಂರಕ್ಷಣೆಗೆ ಕೊಡವ ಸಮುದಾಯ ಆದ್ಯತೆ ನೀಡುತ್ತಿರುವುದು ಮಾದರಿಯಾಗಿದೆ. ಮೂಲಸಂಸ್ಕೖತಿ ಸಂರಕ್ಷಣೆ ನಿಟ್ಟಿನಲ್ಲಿ ಕೊಡವರ ಪ್ರಯತ್ನ ಕನಾ೯ಟಕದ ಇತರ ಸಮುದಾಯವರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.

ದೆಹಲಿಗೆ ತೆರಳಿದಾಗಲೆಲ್ಲಾ ತಾನು ಕೊಡಗನ್ನು ಪ್ರತಿನಿಧಿಸುವ ಸಂಸದ ಎಂದಾಗ ಪ್ರತೀಯೋ೯ವರೂ ಕೊಡಗಿನ ಹೆಸರು ಕೇಳಿದೊಡನೆ ಗೌರವದಿಂದ ನೋಡುತ್ತಾರೆ. ಕೊಡಗಿನ ಕೀತಿ೯ ಸವ೯ರಿಗೂ ಪರಿಚಿತವಾಗಿರುವುದು ಹೆಮ್ಮೆ ತಂದಿದೆ ಎಂದು ನುಡಿದರು. ಬಸವರಾಜ ಬೊಮ್ಮಾಯಿವರು ಕನಾ೯ಟಕದಲ್ಲಿ ನೀರಾವರಿ ಸಚಿವರಾಗಿದ್ದ ಸಂದಭ೯ ಕೆ.ಆರ್.ಎಸ್. ಹಾರಂಗಿ ಸೇರಿದಂತೆ ಕೊಡಗು, ಮೈಸೂರಿನ ವಿವಿಧ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನಡಿ ಸಹಕರಿಸಿದ್ದನ್ನೂ ಯದುವೀರ್ ಕೖತಜ್ಞತಾಪೂವ೯ಕವಾಗಿ ಸ್ಮರಿಸಿದರು.

 ವಿಧಾನಪರಿಷತ್ ಶಾಸಕ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರ ಸಂಸ್ಕೖತಿಯ ಹಿರಿಮೆಯ ಸಂರಕ್ಷಣೆಗಾಗಿ ಕೊಡವ ಸಮಾಜಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದರಲ್ಲದೇ, ಮಾದಾಪುರ ಕೊಡವ ಸಮಾಜದ ಕಟ್ಟಡದ ಉಳಿದ ಕಾಮಗಾರಿಗಳಿಗೆ ಶಾಸಕರ ಅನುದಾನದಿಂದ 10 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದರು.

ಕನಾ೯ಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಮಾದಾಪುರ ವ್ಯಾಪ್ತಿಗೆ ಈ ನೂತನ ಕಟ್ಟಡ ಐನ್ ಮನೆಯಿದ್ದಂತೆ ಎಂದು ಹೇಳಿದರಲ್ಲದೇ, ಪ್ರಬಲವಾದ ಪರಂಪರೆ ಇರುವುದರಿಂದಾಗಿಯೇ ಕೊಡವರ ಅಸ್ತಿತ್ತವನ್ನು ಎಂದಿಗೂ ಅಲಪಗಾಡಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. 1 ಲಕ್ಷ ಜನಸಂಖ್ಯೆಯಿದ್ದರೂ ತಮ್ಮ ವಿಶಿಷ್ಟ ಸಂಸ್ಕೖತಿ, ಸಂಪ್ರದಾಯಗಳಿಂದಾಗಿ ಕೊಡವರು ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ ಎಂದೂ ಮಹೇಶ್ ನಾಚಯ್ಯ ಹೆಮ್ಮೆಯಿಂದ ನುಡಿದರು.

ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಸಂದಭ೯ ಕೊಡವರ ಮೇಲಿನ ವಿಶೇಷ ಅಭಿಮಾನದಿಂದ ಬಸವರಾಜ ಬೊಮ್ಮಾಯಿವರು ಮಾದಾಪುರ ಕೊಡವ ಸಮಾಜದ ಭವನ ನಿಮಾ೯ಣಕ್ಕಾಗಿ 1 ಕೋಟಿ ರು. ಅನುದಾನನ್ನು ಸಮಸ್ಯೆಯಿಲ್ಲದಂತೆ ಬಿಡುಗಡೆ ಮಾಡಿದ್ದರು. ಅಂತೆಯೇ ಕೊಡವ ಸಮುದಾಯದ ಅಭಿವೖದ್ದಿಗಾಗಿ ಬೊಮ್ಮಾಯಿಯವರು ನೀಡಿದ್ದ 10 ಕೋಟಿ ರು. ಅನುದಾನದಲ್ಲಿ 5 ಕೋಟಿ ರು.ಗಳನ್ನು ಕೊಡವ ಸಮಾಜಗ ಒಕ್ಕೂಟಕ್ಕೆ ನೀಡಲಾಗಿದ್ದು ಉಳಿದ 6 ಕೋಟಿ ರು. ಅನುದಾನವನ್ನು ಎಲ್ಲಾ ಕೊಡವ ಸಮಾಜಗಳಿಗೆ ತಲಾ 10 ಲಕ್ಷ ರು.ಗಳಂತೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ಮಡಿಕೇರಿಯಲ್ಲಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯ ಆಧುನೀಕರಣಕ್ಕೆ ಬಸವರಾಜ ಬೊಮ್ಮಾಯಿವರು 200 ಕೋಟಿ ರು. ಅನುದಾನ ನೀಡಿದ್ದಲ್ಲದೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಮೊದಲ ಬಾರಿ 1 ಕೋಟಿ ರು. ಅನುದಾನ ನೀಡಿದ್ದರು ಎಂದೂ ರಂಜನ್ ಸ್ಮರಿಸಿದರು. ಬೆಂಗಳೂರು ಕೊಡವ ಸಮಾಜಕ್ಕೆ 7 ಎಕ್ರೆ ಜಮೀನು ದೊರಕುವಲ್ಲಿಯೂ ಬೊಮ್ಮಾಯಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ ಅಪ್ಪಚ್ಚು ರಂಜನ್, ಶೀಘ್ರದಲ್ಲಿ ಬೊಮ್ಮಾಯಿವರು ಕೇಂದ್ರದ ಸಚಿವರಾಗಲಿ ಎಂದು ಕೊಡಗಿನ ಜನತೆಯ ಪರವಾಗಿ ಹಾರೈಸಿದರು.

 ವಿಧಾನಪರಿಷತ್ ಮಾಜಿ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಮಾದಾಪುರ ವ್ಯಾಪ್ತಿಯ ಹಲವಾರು ಜನರಿಗೆ ಈ ಭವನ ಅತ್ಯಂತ ಅಗತ್ಯವಾಗಿತ್ತು. ಖಂಡಿತಾ ಸಾಥ೯ಕ ಪ್ರಯತ್ನ ಎಂದರು. ಬಸವರಾಜ ಬೊಮ್ಮಾಯಿಯವರ ಸೇವಾ ಕಾಯ೯ವನ್ನು ಹೆಮ್ಮೆಯಿಂದ ಸ್ಮರಿಸಿದ ವೀಣಾ ಅಚ್ಚಯ್ಯ, ಅಪರೂಪದಲ್ಲಿ ಅಪರೂಪದ ಮುಖ್ಯಮಂತ್ರಿಯಾಗಿದ್ದವರು ಬೊಮ್ಮಾಯಿವರು ಎಂದರು. ಕೊಡಗಿನ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಬಸವರಾಜ ಬೊಮ್ಮಾಯಿಯವರಿಂದಾಗಿ ಕೊಡಗಿಗೆ ಸಾಕಷ್ಟು ಅನುದಾನ ದೊರಕಿತ್ತು ಎಂದೂ ಅವರು ಹೇಳದರು.

 ಎಸ್ ಎಲ್ ಎನ್ ಸಂಸ್ಥೆಯ ಉದ್ಯಮಿ ಸಾತಪ್ಪನ್ ಮಾತನಾಡಿ, 30 ವಷ೯ಗಳ ಹಿಂದೆ ಪಾಲಿಬೆಟ್ಟದ ಚಿಮ್ಮಿ ಕುಟ್ಟಯ್ಯ ಅವರು ನೀಡಿದ ಕಾಫಿಯಿಂದ ನಾವು ಕಾಫಿ ಉದ್ಯಮ ಪ್ರಾರಂಭಿಸಿ, ಈಗ 2 ಸಾವಿರ ಉದ್ಯೋಗಿಗಳ ಮೂಲಕ ದೇಶದ ಪ್ರಮುಖ ಕಾಫಿ ತಯಾರಿಕಾ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದೇವೆ. ಕೊಡಗಿನವರು ಕಾಫಿ ಉದ್ಯಮಕ್ಕೆ ನೀಡಿದ ಕೊಡುಗೆ ಸದಾ ಸ್ಮರಸಿಕೊಳ್ಳುತ್ತೇವೆ ಎಂದರು. ಹೋಲಿಕೆಯಲ್ಲಿ ಬಹಳಷ್ಟು ಸಮಾಜಗಳಿಗೆ ಹೋಲಿಸಿದರೆ ಮಾದಾಪುರ ಕೊಡವ ಸಮಾಜ ಅತ್ಯಂತ ವ್ಯವಸ್ಥಿತವಾಗಿ ಸುಂದರವಾಗಿ ನಿಮಿ೯ಸಲ್ಪಟ್ಟಿದೆ ಎಂದೂ ಅವರು ಶ್ಲಾಘಿಸಿದರು.

ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನುಮೇದಪ್ಪ ಮಾತನಾಡಿ, 2006 ರಿಂದ ಕಾಮಗಾರಿ ಪ್ರಾರಂಭಿಸಲಾದ ಮಾದಾಪುರ ಕೊಡವ ಸಮಾಜದ ಭವನ ನಿಮಾ೯ಣಕ್ಕೆ 5.50 ಕೋಟಿ ರು. ಅಂದಾಜು ಮಾಡಲಾಗಿತ್ತು. ಇದೀಗ 4.50 ಕೋಟಿ ರು. ವೆಚ್ಚವಾಗಿದ್ದು ಇನ್ನೂ 1 ಕೋಟಿ ರು. ಹಣ ಕಾಮಗಾರಿಗೆ ಬೇಕಾಗಿದೆ . 5 ಎಕ್ರೆ ಜಮೀನು ಮಾದಾಪುರ ಕೊಡವ ಸಮಾಜದಿಂದ ಖರೀದಿಸಲಾಗಿದೆ. 1 ಸಾವಿರ ವಾಹನಗಳ ನಿಲುಗಡೆಗೆ ಅವಕಾಶವಿದ್ದು, 2 ಸಾವಿರ ಜನರಿಗೆ ಕೂರಲು ವ್ಯವಸ್ತೆಯಿದೆ ಎಂದರು. ಅಂದು ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಪ್ರಯತ್ನದಿಂದ ಶಾಸಕರ ಅನುದಾನದಲ್ಲಿ 80 ಲಕ್ಷ ರು. ದೊರಕಿತ್ತು. ಅನೇಕ ದಾನಿಗಳ ಸಹಕಾರದಿಂದಾಗಿ ಈ ಸುಸಜ್ಜಿತ ಭವನ ನಿಮಾ೯ಣವಾಗಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಮಾಜಿ ಶಾಸಕ ಮಂಡೇಪಂಡ ಸುನೀ್ಲ್ ಸುಬ್ರಹ್ಮಣಿ, ಉದ್ಯಮಿಗಳಾದ ವಿಶ್ವನಾಥನ್, ನಾಪಂಡ ಮುತ್ತಪ್ಪ, ತೆರಿಗೆ ಇಲಾಖೆಯ ಆಯುಕ್ತ ಜಯರಾಮ್, ಪದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣ ಅವರ ತಂದೆ ಮಚ್ಚಂಡ ಬೋಪಣ್ಣ,, ಸಮಾಜದ ಉಪಾಧ್ಯಕ್ಷ ಪಾಸುರ ಎನ್. ಉತ್ತಪ್ಪ, ಆಡಳಿತ ಮಂಡಳಿಯ ನಿದೇ೯ಶಕರು ಹಾಜರಿದ್ದರು.

 ಅಜ್ಜಿಕುಟ್ಟೀರ ಗಿರೀಶ್ ಮತ್ತು ಸುನೀತಾ ನಿರೂಪಿಸಿದ ಕಾಯ೯ಕ್ರಮದಲ್ಲಿ ಮಾದಾಪುರ ಕೊಡವ ಸಮಾಜದ ಕಾಯ೯ದಶಿ೯ ನಾಗಂಡ ಸಿ. ಕಾಳಪ್ಪ ವಂದಿಸಿದರು. ಕೊಡವ ಸಮಾಜ ಭವನ ನಿಮಾ೯ಣಕ್ಕೆ ಸಹಕರಿಸಿದ ದಾನಿಗಳು, ತಾಂತ್ರಿಕ ಸಿಬ್ಬಂದಿಗಳನ್ನು ಈ ಸಂದಭ೯ ಸನ್ಮಾನಿಸಿ ಗೌರವಿಸಲಾಯಿತು.ವಿವಿಧ ತಂಡಗಳಿಂದ ಕೊಡವ ಸಾಂಪ್ರದಾಯಿಕ ನೖತ್ಯಗಳ ಪ್ರದಶ೯ನವೂ ಕಾಯ೯ಕ್ರಮದ ಆಕಷ೯ಣೆಯಾಗಿತ್ತು.  

ಕೊಡವರನ್ನು ಯಾರೂ ಗೆಲ್ಲಲಾಗದು!

ಕೊಡಗಿಗೆ ಯಾರೇ ಬಂದರೂ ಇಲ್ಲಿನ ಕೊಡವರನ್ನು ಗೆಲ್ಲಲಾಗುವುದಿಲ್ಲ. ಕೊಡವರು ತಮ್ಮ ಪ್ರೀತಿ, ವಿಶ್ವಾಸ, ಆತಿಥ್ಯದಿಂದ ಎಲ್ಲರನ್ನೂ ಸೋಲಿಸಿಬಿಡುತ್ತಾರೆ. ಕೊಡವರ ಸಾಂಪ್ರದಾಯಿಕ ಧಿರಿಸು, ಆಚಾರ, ವಿಚಾರಗಳು ಕೂಡ ಎಲ್ಲರ ಮನಗೆಲ್ಲುವಂತಿದೆ. ಹೀಗಾಗಿಯೇ ಯಾರೂ ಗೆಲ್ಲಲಾಗದ ಕೊಡವರು ನಿಜವಾದ ಅಥ೯ದಲ್ಲಿಯೂ ವೀರರಾಗಿದ್ದಾರ.

- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ.