ಕೊಡವ ಭಾಷೆ ಸಂಸ್ಕೃತಿಯು ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು: ಎ.ಎಸ್.ಪೊನ್ನಣ್ಣ

Feb 7, 2026 - 20:35
 0  400
ಕೊಡವ ಭಾಷೆ ಸಂಸ್ಕೃತಿಯು ಮುಂದಿನ ಪೀಳಿಗೆಗೆ ಹಸ್ತಾಂತರವಾಗಬೇಕು: ಎ.ಎಸ್.ಪೊನ್ನಣ್ಣ

ಮಡಿಕೇರಿ ಫೆ.07:-ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಎಲ್ಲೆಡೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ನೂತನವಾಗಿ ಆರಂಭಿಸಿರುವ ‘ಕೊಡವ ಪುಸ್ತಕ ಪತ್ತಾಯ’ ಯೋಜನೆಯು ಶ್ಲಾಘನಿಯ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಮೆಚ್ಚುಗೆಯ ನುಡಿಗಳನ್ನಾಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವೀರಾಜಪೇಟೆಯಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಇದೇ ಮೊದಲಿಗೆ ಸ್ಥಾಪಿಸಿದ ‘ಕೊಡವ ಪುಸ್ತಕ ಪತ್ತಾಯ’ವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಅಕಾಡೆಮಿಯ ಇಂತಹ ಯೋಜನೆಯು ಕೊಡವ ಸಾಹಿತ್ಯ-ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.

ಒಂದು ಭಾಷೆಯಿದ್ದರೆ ಮಾತ್ರ ಸಂಬಂಧಪಟ್ಟ ಜನಾಂಗ ಹಾಗೂ ಸಂಸ್ಕøತಿ ಉಳಿಯಲು ಸಾಧ್ಯ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಯಾವುದೇ ಅನುಕೂಲತೆಗಳು ಇರಲಿಲ್ಲ. ಇಂತಿದ್ದರೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿದ್ದಾರೆಂದರೆ, ಅವನ್ನೆಲ್ಲ ನಾವು ನಮ್ಮ ಮುಂದಿನ ಪೀಳಿಗೆಗೆ ಸಾಂಪ್ರದಾಯಿಕವಾಗಿ ಮುಂದುವರಿಸುವ ಕಾರ್ಯ ಆಗಬೇಕು. ಕೊಡವ ಪುಸ್ತಕ ಪತ್ತಾಯವನ್ನು ಎಲ್ಲಾ ಐನ್‍ಮನೆಗಳಲ್ಲಿ, ಮನೆ ಮನೆಗಳಲ್ಲಿ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದು ಸಂತಸದ ವಿಷಯ. ಎಲ್ಲಾರೂ ಇದಕ್ಕೆ ಸಹಕರಿಸುವಂತಾಗಲಿ ಎಂದರು.

 ಪುಸ್ತಕ ಪತ್ತಾಯ ಪ್ರತಿಯೊಬ್ಬರ ಪ್ರತಿಷ್ಠೆಯ ವಿಷಯವಾಗಲಿ: ಮಹೇಶ್ ನಾಚಯ್ಯ: ಕೊಡವ ಭಾಷೆಯು ಉತ್ತಮ ಮೌಲ್ಯಗಳನ್ನು ಹೊಂದಿರುವ, ಸಂಪದ್ಬರಿತವಾಗಿರುವ ಭಾಷೆಯಾಗಿದೆ. ಕೊಡವ ಭಾಷೆಯು ತನ್ನದೇ ಆದ ಕಲೆ, ಜಾನಪದ, ಸಂಸ್ಕøತಿ, ಸಾಹಿತ್ಯ ಹಾಗೂ ಒಂದು ಜೀವನ ಕ್ರಮವನ್ನು ರೂಪಿಸಿರುವ ಭಾಷೆಯಾಗಿದ್ದು ಇದರ ಬಳಕೆ ವೃದ್ಧಿಯಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೆಳಿದರು. ಕೊಡವ ಭಾಷೆಯಲ್ಲಿ ಮತ್ತುಷ್ಟು ಸಾಹಿತ್ಯ ರೂಪುಗೊಳ್ಳಬೇಕು. ಸಾಹಿತಿಗಳಿಗೆ ಉತ್ತಮವಾದ ವೇದಿಕೆ ಸೃಷ್ಟಿಯಾಗಬೇಕಾಗಿದೆ. ಇದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ರೂಪಿಸಿರುವ “ಕೊಡವ ಪುಸ್ತಕ ಪತ್ತಾಯ” ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕೊಡವ ಭಾಷೆಯ ಬರಹಗಾರರು, ಸಾಹಿತಿಗಳ ಸಾಹಿತ್ಯಪರ ಚಿಂತನೆ ಜಿವಂತವಾಗಿರಲು ದಾರಿದೀಪವಾಗಲಿದೆ. ಕೊಡವ ಪುಸ್ತಕ ಪತ್ತಾಯವನ್ನು ಮುಂದಿನ ದಿನಗಳಲ್ಲಿ ಪ್ರತೀಯೊಂದು ಕೊಡವ ಸಮಾಜಗಳಲ್ಲಿ, ಭಾಷಿಕರ ಸಮಾಜಗಳಲ್ಲಿ, ಬಲ್ಯಮನೆ, ಮುಂದುಮನೆ, ಐನ್‍ಮನೆಗಳಲ್ಲಿ, ದೇವನೆಲೆಗಳಲ್ಲಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

ಲೇಖಕರ ಪುಸ್ತಕಗಳು ಒಂದೆಡೆ ಹೇಳಕೇಳದವರಿಲ್ಲದೆ ಬಿದ್ದುಕೊಂಡಿರುವ ಕಾಲಘಟ್ಟದಲ್ಲಿ ಪುಸ್ತಕ ಪತ್ತಾಯವು ಅದಕ್ಕೆಲ್ಲ ಮರುಜೀವ ಕೊಡುವ ಕಾಲ ಸನ್ನಿಹಿತವಾಗಿದೆ. ಸಾಹಿತ್ಯಾಭಿಮಾನಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆ ಮೂಲಕ ಕೊಡಗಿನಲ್ಲಿ ಪುಸ್ತಕ ಪತ್ತಾಯಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಒಂದಿಷ್ಟು ಜಾಗ ಮಾಡಿಕೊಂಡರೆ ಕ್ರಮೇಣ ಎಲ್ಲಾರಲ್ಲಿ ಪುಸ್ತಕ ಪ್ರೇಮ ಉಂಟಾಗಿ ಜ್ಞಾನ ಭಂಡಾರವೂ ವೃದ್ಧಿಸಲು ಅನುಕೂಲ ಆಗುತ್ತದೆ ಎಂದರು. ನಮ್ಮ ಹಿರಿಯರಲ್ಲಿ ಜಾನಪದ ಸಾಹಿತ್ಯದ ಅರಿವಿತ್ತು. ಅದರಿಂದಾಗಿ ಪಟ್ಟೋಲೆ ಪಳಮೆಯಂತಹ ಕೃತಿ ಸೃಷ್ಟಿಯಾಗಲು ಸಾಧ್ಯವಾಗಿದೆ. ಕೊಡವ ಸಾಹಿತ್ಯ ಕ್ಷೇತ್ರವನ್ನು ಅಂದಿನ ಕಾಲಮಾನದಲ್ಲಿ ಉತ್ತುಂಗಕ್ಕೆ ಏರಿಸಿದವರು.

 ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಐಚೆಟ್ಟಿರ ಮಾ. ಮುತ್ತಣ್ಣ, ಬಾಚಮಡ ಡಿ.ಗಣಪತಿ, ಮಂಡಿರ ಜಯ ಅಪ್ಪಣ್ಣ, ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ... ಇಂತಹವರು. ಅವರೆಲ್ಲರ ಸಾಹಿತ್ಯವು ಇಂದಿಗೂ ಜಿವಂತವಾಗಿದೆ. ಇವರೆಲ್ಲರ ಸಾಹಿತ್ಯವನ್ನು ಜಿವಂತವಾಗಿರಿಸಲು ‘ಕೊಡವ ಪುಸ್ತಕ ಪತ್ತಾಯ’ವು ಸಹಕಾರಿಯಾಗಲಿದೆ ಎಂದರು. ಕೊಡಗಿನ ಹಲವು ಮನೆಗಳಲ್ಲಿ ಮನೆ ಕಟ್ಟುವಾಗಲೇ ಮದ್ಯದ ಬಾಟಲಿಗಳನ್ನು ಶೇಖರಿಸಿ ಒಂದೆಡೆ ಇಟ್ಟುಕೊಳ್ಳಲು ಕಪಾಟುಗಳನ್ನು ಮಾಡಿಕೊಳ್ಳುವ ಸಂಸ್ಕøತಿ ಬೆಳೆಯುತ್ತಿದೆ. ಇದರೊಂದಿಗೆ ಪ್ರತೀ ಮನೆಗಳಲ್ಲಿ ಪುಸ್ತಕಗಳನ್ನು ಶೇಖರಿಸಿ ಒಂದೆಡೆ ಇಟ್ಟುಕೊಳ್ಳಲು ಪುಸ್ತಕ ಪತ್ತಾಯ ಸ್ಥಾಪಿಸುವ ಬಗ್ಗೆ ಪ್ರತಿಯೊಬ್ಬರು ಚಿಂತಿಸುವಂತಾಗಬೇಕು. ‘ಮದ್ಯದ ಪತ್ತಾಯ’ವು ಯಾರೊಬ್ಬರ ಪ್ರತಿಷ್ಠೆಯಾಗಬಾರದು, ಪುಸ್ತಕ ಪತ್ತಾಯ ಪ್ರತಿಯೊಬ್ಬರ ಪ್ರತಿಷ್ಠೆಯಾಗಬೇಕು ಎಂದರು.

 ಅಕಾಡೆಮಿ ಕಾರ್ಯಕ್ರಮವು ಎಲ್ಲರ ಒಗ್ಗಟ್ಟಿಗೆ ಕಾರಣವಾಗಿದೆ: ಅರುಣ್ ಮಾಚಯ್ಯ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ತಮ್ಮ ಮಾತಿನಲ್ಲಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಿಂದಾಗಿ ಎಲ್ಲಾ ಜನಾಂಗಗಳ ಒಗ್ಗಟ್ಟಿಗೆ ಕಾರಣವಾಗಿದೆ.

ಕೊಡವ ಭಾಷೆಯ ಬಳಕೆ ಅಧಿಕವಾಗಬೇಕು. ವಿದೇಶದಲ್ಲಿರುವ ನಮ್ಮ ಮಕ್ಕಳಿಗೆ ಕೊಡವ ಭಾಷೆ-ಸಾಹಿತ್ಯದ ಅಭಿರುಚಿಯನ್ನು ಪೋಷಕರು ಕಲಿಸುವಂತಾಗಬೇಕು ಎಂದರು. ಕೊಡವ ಭಾಷೆ ಹಾಗೂ ಸಂಸ್ಕøತಿಯು ಇಂದಿನ ದಿನಗಳಲ್ಲಿ ಎಲ್ಲಾ ಜನಾಂಗವನ್ನು ಒಗ್ಗೂಡಿಸುತ್ತಿರುವುದಕ್ಕೆ ಪ್ರಸ್ತುತ ಅಕಾಡೆಮಿಯ ಕಾರ್ಯಕ್ರಮಗಳು ಕಾರಣ. ಇಂತಹ ಕಾರ್ಯಕ್ರಮಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕೆಂದರು.

 ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕುಟ್ಟ ಕೊಡವ ಸಮಾಜ ಹಾಗೂ ಬಾಳುಗೋಡು ಕೊಡವ ಫೆಡರೇಶನ್ನಿನಲ್ಲಿ ‘ಕೊಡವ ಪುಸ್ತಕ ಪತ್ತಾಯ’ ಸ್ಥಾಪಿಸುವಂತೆ ಮನವಿ ಮಾಡಿದರು. ಪುಸ್ತಕ ಓದುವ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಕೊಡವ ಭಾಷೆಗೆ ಮಾತ್ರ ಅವಕಾಶ ನೀಡಬೇಕು ಎಂದರು.

ವೇದಿಕೆಯಲ್ಲಿ ಅಕಾಡೆಮಿ ಅಧ್ಯಕ್ಷರ ಶಾಲಾದಿನಗಳಲ್ಲಿ ಶಿಕ್ಷಕಿಯಾಗಿದ್ದ ಹಿರಿಯರಾದ ಕರ್ನಂಡ ಬೊಳ್ಳಮ್ಮ ನಾಣಯ್ಯ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಆಶೀರ್ವದಿಸಿದರು. ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯುಕುಮಾರ್ ತಮ್ಮ ಮಾತಿನಲ್ಲಿ, ಅಕಾಡೆಮಿಯ ವತಿಯಿಂದ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದಕ್ಕೆ ತಮ್ಮ ಸಹಕಾರವನ್ನು ನೀಡಿ, ಸೋಮವಾಪೇಟೆ ವಿಭಾಗದಲ್ಲಿ ಕೊಡವ ಭಾಷೆ-ಸಾಹಿತ್ಯ, ಸಂಸ್ಕøತಿಪರ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ ಎಂದರು. ಮಾದಾಪುರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಮನು ಮೇದಪ್ಪ ಮಾತನ್ನಾಡಿ ಕೊಡವ ಪುಸ್ತಕ ಪತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸುಬ್ಬಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಮಾತನಾಡಿ ಕೊಡವ ಪುಸ್ತಕ ಪತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿದರು.

ಕೊಡವ ಭಾಷಿಕ ಸಮಾಜದ ವತಿಯಿಂದ ಎಲ್ಲಾ ಸಮಾಜಗಳ ಪರವಾಗಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಪಡಿಞmರಂಡ ಜಿ. ಅಯ್ಯಪ್ಪ, ಕೊಡವ ಭಾಷಿಕ ಸಮುದಾಯಗಳ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿದರು. ಕೊಡವ ಬಾಷೆಯನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಾಷೆ-ಸಾಹಿತ್ಯ, ಸಂಸ್ಕøತಿಯನ್ನು ಬೆಳೆಸಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ ಎಂದರು. ಎಲ್ಲ ಜನಾಂಗಗಳ ಪರವಾಗಿ ‘ಕೊಡವ ಪುಸ್ತಕ ಪತ್ತಾಯ’ಕ್ಕೆ ಬೆಂಬಲ ಸೂಚಿಸಿದರು.

ಇದೇ ವೇಳೆ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಕೆಂಬಟ್ಟಿ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ವೀರಾಜಪೇಟೆಯ ಪಂಜರಪೇಟೆ ಕೊಡವ ಕೇರಿ ಅಧ್ಯಕ್ಷ ವಾಂಚಿರ ಟಿ.ನಾಣಯ್ಯ, ಪರದಂಡ ವಿಠಲ ಹಾಗೂ ಪದಾಧಿಕಾರಿಗಳು, ಕೆಂಬಟ್ಟಿ ಸಮಾಜದ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ, ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಕಾರ್ಯಧ್ಯಕ್ಷ ಬಾಳೆಕುಟ್ಟಡ ಉದಯ ಮಾದಪ್ಪ ಮತ್ತಿತರರು ಆಗಮಿಸಿ ಕೊಡವ ಪುಸ್ತಕ ಪತ್ತಾಯಕ್ಕೆ ಬೆಂಬಲ ಸೂಚಿಸಿದರು. ಬಣ್ಣ ಸಮಾಜದ ಅಧ್ಯಕ್ಷರಾದ ಬೀಕಚಂಡ ಪುಟ್ಟ ಬೆಳ್ಯಪ್ಪ ಹಾಗೂ ಸಮಾಜ ಬಾಂಧವರು ಹಾಜರಿದ್ದರು.

ಕುಡಿಯ ಸಮಾಜದ ಕುಡಿಯರ ಕೆ.ಮುತ್ತಪ್ಪ ಹಾಗೂ ಜನಾಂಗ ಭಾಂದವರು ಉಪಸ್ಥಿತರಿದ್ದರು. ಸಾಹಿತಿಗಳಾದ ಪಿ.ವೈಲೇಶ್, ಉಳುವಂಗಡ ಕಾವೇರಿ ಉದಯ, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ಪ್ರೊ.ಪಟ್ಟಡ ಎ. ಪೂವಣ್ಣ, ತಾತಂಡ ಪ್ರಭಾ ನಾಣಯ್ಯ, ಕರೋಟಿರ ಶಶಿ ಸುಬ್ರಮಣಿ, ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಅಜ್ಜಿನಿಕಂಡ ಪ್ರಮೀಳ ನಾಚಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅರೆಕಾಡ್-ಹೊಸ್ಕೇರಿ ಕೊಡವ ಅಸೋಸಿಯೇಶನ್ ಅಧ್ಯಕ್ಷರಾದ ಕುಕ್ಕೆರ ಜಯಚಿಣ್ಣಪ್ಪ ಹಾಗೂ ಪದಾಧಿಕಾರಿಗಳು, ಹಿರಿಯ ಶಿಕ್ಷಕರಾದ ಬೀನಂಡ ಎಸ್.ಪೂಣಚ್ಚ, ಪ್ರಗತಿ ಶಾಲೆಯ ಸ್ಥಾಪಕ ಮಾದಂಡ ಎಸ್.ಪೂವಯ್ಯ, ಪಾಲೇಂಗಡ ಅಮಿತ್ ಭೀಮಯ್ಯ, ಚೇಂದಂಡ ವಸಂತ ಇದ್ದರು.

ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಿಂದರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಪಂಡ ಗಣೇಶ್ ಉಪಸ್ಥಿತರಿದ್ದರು. ಮೊಳ್ಳೆಕುಟ್ಟಡ ದಿನು ಬೋಜಪ್ಪ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಆರಂಭದಲ್ಲಿ ಮೇಚಂಡ ಅಚ್ಚಪ್ಪ ತಂಡದವರಿಂದ ಶಾಸಕರು, ಅಕಾಡೆಮಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗೂ ನೆರೆದಿದ್ದ ಸಾಹಿತ್ಯಾಭಿಮಾನಿಗಳನ್ನು ಶಾಸಕರ ಮನೆಯಿಂದ ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕಿನ ಮೂಲಕ ಕಾರ್ಯಕ್ರಮ ನಡೆದ ಸ್ಥಳಕ್ಕೆ ಕರೆತಂದರು.

ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಿಂದ ಸ್ವಾಗತ ನೃತ್ಯ, ಉಮ್ಮತಾಟ್ ಪ್ರದರ್ಶನ ನಡೆಯಿತು. ಸದಸ್ಯೆ ಉದ್ದಪಂಡ ವಿಮಲ ಮಂದಣ್ಣ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯ ನಾಪಂಡ ಸಿ.ಗಣೇಶ್ ಸ್ವಾಗತಿಸಿದರು. ಸದಸ್ಯರಾದ ಕಂಬೆಯಂಡ ಡೀನ ಬೋಜಣ್ಣ, ಪುತ್ತರಿರ ಪಪ್ಪು ತಿಮ್ಮಯ್ಯ ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ಕೊಂಡಿಜಮ್ಮನ ಎಂ. ಬಾಲಕೃಷ್ಣ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0