ಕೊಡ್ಲಿಪೇಟೆ:ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ 4 ದಿನಗಳ ಕಾರ್ಯಕ್ರಮ
admincoorgdaily

ಕೊಡ್ಲಿಪೇಟೆ: ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ (ಸುನ್ನಿ ಜುಮ್ಮಾ ಮಸ್ಜಿದ್ ) ವತಿಯಿಂದ ಈದ್ ಮಿಲಾದ್ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ 4 ದಿನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 27, 28, 29 ರ ದಿನಗಳಲ್ಲಿ ಧಾರ್ಮಿಕ ಪ್ರವಚನ, ಹಾಗೂ 30 ರಂದು ವಿಶೇಷ ಮೀಲಾದ್ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 27ರಂದು ಗುರುವಾರ ರಾತ್ರಿ 7.30ಕ್ಕೆ ಬಹು ಅಸ್ಲಂ ಆಝ್‌ಹರಿ , 28 ರಂದು ಶುಕ್ರವಾರ ಬಹು. ಅಬ್ದುಲ್ ರಾಫಿ ಹಿಮಮಿ ಹಾಗೂ 29 ಶನಿವಾರ ರಂದು ಬಹು. ಉಸ್ತಾದ್ ರಫೀಕ್ ದಾರಿಮಿ ರವರುಗಳಿಂದ ಧಾರ್ಮಿಕ ಪ್ರವಚನ, 29 ರಂದು ರಾತ್ರಿ ಬಹು ಸಯ್ಯದ್ ಝ್ಯೆನುಲ್ ಆಭಿದ್ ತಂಙಳ್ ರವರ ನೇತ್ರತ್ವದಲ್ಲಿ ಸ್ವಲಾತ್ ದುಆ ಮಜ್ಲಿಸ್ ನಡೆಯಲಿದೆ, ಸದರಿ ದಿನ ಶನಿವಾರದಂದು ಮಧ್ಯಾಹ್ನ ಬ್ಯಾಡಗೊಟ್ಟ ಮದ್ರಸ ಸಮೀಪದಿಂದ ಮೀಲಾದ್ ಸಂದೇಶ ಕಾಲ್ನಡಿಗೆ ಜಾಥ ಏರ್ಪಡಿಸಲಾಗಿದೆ.
30ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಮದ್ರಸ ವಿದ್ಯಾರ್ಥಿಗಳಿಂದ ಮೀಲಾದ್ ಜಲ್ಸಾ ಮತ್ತು ಅನ್ನದಾನ ಜರುಗಲಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ವಿದ್ವಾಂಸರು ಭಾಗವಹಿಸಲಿದ್ದಾರೆಂದು ಮಸ್ಜಿದುನ್ನೂರ್ ಆಡಳಿತ ಮಂಡಳಿ ಪರವಾಗಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದರು.