ಕೊಡ್ಲಿಪೇಟೆ: ಆಸ್ತಿ ವಿಷಯದಲ್ಲಿ ಕಲಹ, 80ರ ವಯೋವೃದ್ಧೆ ಮೇಲೆ ಹಲ್ಲೆ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

ಕೊಡ್ಲಿಪೇಟೆ: ಆಸ್ತಿ ವಿಷಯದಲ್ಲಿ ಕಲಹ, 80ರ ವಯೋವೃದ್ಧೆ ಮೇಲೆ ಹಲ್ಲೆ ಪ್ರಕರಣ : ಮೂವರ ವಿರುದ್ಧ ಪ್ರಕರಣ ದಾಖಲು

ಕೊಡ್ಲಿಪೇಟೆ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ವಾಸದ ಮನೆಯ ವಿಷಯಕ್ಕೆ ಸಂಬಂಧಿಸಿದಂತೆ ಸಮೀಪದ ಕಟ್ಟೆಪುರ ಗ್ರಾಮದ ವೃದ್ಧೆ ಸರೋಜಮ್ಮ(80) ಮತ್ತು ಅವರ ಮಗಳು ಸುಷ್ಮಾ ಎಂಬುವವರ ಮೇಲೆ ಅದೇ ಗ್ರಾಮದ ಸಂದೇಶ ಮತ್ತು ಚೈತ್ರಾ ಹಾಗೂ ಮದಲಾಪುರದ ಲೋಕೇಶ್ ಎಂಬುವವರು ಸೇರಿ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರ ಮೇಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡ್ಲಿಪೇಟೆ ಮುಖ್ಯರಸ್ತೆಯಲ್ಲಿರುವ ನಮ್ಮ ಮನೆಗೆ ನಾವು ಬಂದಾಗ ಬೇರೆಯವರು ವಾಸವಿದ್ದರು ಇದನ್ನು ಪ್ರಶ್ನಿಸಿದಾಗ ಸಂದೇಶ ಮತ್ತು‌ ಆತನ ಪತ್ನಿ ಚೈತ್ರಾ ಹಾಗೂ ಸಂದೇಶನ ಗೆಳೆಯ ಎಂ.ಆರ್.ಲೋಕೇಶ್ ನಮ್ಮ ತಲೆಯನ್ನು ಹಿಡಿದು ಎಳೆದಾಡಿ ಅವ್ಯಾಚ್ಚ ಶಬ್ದಗಳಿಂದ ಬೈದು ನಿಂದಿಸಿ ನಮ್ಮ ಬಟ್ಟೆಯನ್ನು ಎಳೆದು ಹರಿದಾಕಿ ಕ್ಯೆಯಿಂದ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಸರೋಜಮ್ಮ ಮತ್ತು ಮಗಳು ಸುಷ್ಮಾ ನೀಡಿದ ಪುಕಾರಿನ ಮೇರೆಗೆ ಪ್ರಾಥಮಿಕ ವರದಿಯನ್ನು ಪಡೆದುಕೊಂಡ ಪೊಲೀಸರು ಬಿಎನ್‌ಎಸ್‌ 115(2) ,118(1) , 74,351(2)352 ಸೇರಿದಂತೆ ಮುಂತಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.