ಕೊಳಕೇರಿ: ಗಾಂಜಾ ಸೇವನೆ ಆರೋಪದ ಮೇಲೆ 4 ಜನರನ್ನು 3 ತಿಂಗಳು ಊರಿನಿಂದ ಬಹಿಷ್ಕರಿಸಿದ ಜಮಾಅತ್ ಸಮಿತಿ

ಕೊಳಕೇರಿ: ಗಾಂಜಾ ಸೇವನೆ ಆರೋಪದ ಮೇಲೆ 4 ಜನರನ್ನು 3 ತಿಂಗಳು ಊರಿನಿಂದ ಬಹಿಷ್ಕರಿಸಿದ ಜಮಾಅತ್ ಸಮಿತಿ

ನಾಪೋಕ್ಲು, ಜೂನ್ 20: ಕೊಳಕೇರಿ ಸುನ್ನಿ ಮುಸ್ಲಿಮ್ ಜಮಾಅತ್ ಸಮಿತಿಯು ಗಾಂಜಾ ಸೇವನೆ ಆರೋಪದ ಮೇಲೆ 4 ಜನರನ್ನು ಜೂನ್ 20ರಿಂದ ಸೆಪ್ಟೆಂಬರ್ 20ರವರೆಗೆ 3 ತಿಂಗಳು ಊರಿನಿಂದ ಬಹಿಷ್ಕರಿಸಲು ತೀರ್ಮಾನಿಸಿದೆ. ಈ ಕುರಿತು ಸಮಿತಿಯು ನಿವಾಸಿಗಳಿಗೆ ನೋಟಿಸ್ ನೀಡಿದೆ.

 ಜಮಾಅತ್ ಮಹಾಸಭೆಯ ತೀರ್ಮಾನದಂತೆ ಈ ಕ್ರಮ ಕೈಗೊಂಡಿರುವುದಾಗಿ ಸಮಿತಿ ತಿಳಿಸಿದೆ. ಬಹಿಷ್ಕೃತರೊಂದಿಗೆ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಒಡನಾಟ ಇಟ್ಟುಕೊಳ್ಳಬಾರದು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಈ ತೀರ್ಮಾನ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ. ಜಮಾಅತ್ ಸಮಿತಿಯು ಮಾದಕ ವಸ್ತು ಸೇವನೆಯು ಸಮಾಜಕ್ಕೆ ಹಾನಿಕಾರಕ ಎಂದು ತಿಳಿಸಿ, ಅಂತಹ ಚಟುವಟಿಕೆಗಳನ್ನು ವಿರೋಧಿಸುವುದಾಗಿ ನೋಟಿಸ್‌ನಲ್ಲಿ ತಿಳಿಸಿದೆ.