ಕೂಡಮಂಗಳೂರು:ಪಲ್ಸ್ ಪೊಲಿಯೊ ಕಾರ್ಯಕ್ರಮ

Dec 21, 2025 - 19:26
 0  182
ಕೂಡಮಂಗಳೂರು:ಪಲ್ಸ್ ಪೊಲಿಯೊ ಕಾರ್ಯಕ್ರಮ

ಕುಶಾಲನಗರ,ಡಿ೨೧: ಕೂಡುಮಂಗಳೂರು ಗ್ರಾಮ‌ ಪಂಚಾಯಿತಿಯ ಚಿಕ್ಕುತ್ತೂರು ಸರ್ಕಾರಿ ಶಾಲೆಯಲ್ಲಿ ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಯಿತು. 

ಡಿಸೆಂಬರ್ ೨೧ ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ವಿತರಿಸುವ ಅಭಿಯಾನ ಪ್ರಾರಂಭಿಸಲಾಗಿದ್ದು, ಚಿಕ್ಕತ್ತೂರು ಶಾಲೆಯಲ್ಲಿ ಐದು ವರ್ಷ ಮೇಲ್ಪಟ್ಟ ನೂರಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಯಿತು. 

ಚಿಕ್ಕತ್ತೂರು ಹಾಗೂ ಸುಂದರನಗರ ಗ್ರಾಮದ ಮಕ್ಕಳಿಗೆ ಚಿಕ್ಕತ್ತೂರು ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ೮ ರಿಂದ ಸಂಜೆ ೫ ಗಂಟೆಯವರೆಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಯಿತು. 

ಈ ಸಂದರ್ಭ ಚಿಕ್ಕತ್ತೂರು ವಾರ್ಡ್ ಸದಸ್ಯ ದಿನೇಶ್, ಸುಂದರನಗರ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು ಮಕ್ಕಳಿಗೆ ಲಸಿಕೆ ಹಾಕಿದರು. 

ಈ ಸಂದರ್ಭ ಸುಂದರನಗರ ಟಿ.ಎಚ್.ಒ ಸೌಮ್ಯ, ಅಂನವಾಡಿ ಶಿಕ್ಷಕಿ ಬೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಶಿಕ್ಷಕಿ ಸುಶೀಲ, ಆಶಾ ಕಾರ್ಯಕರ್ತೆ ಸುಮಿತ್ರ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0