ಕೂಡಿಗೆ : ರೂ.3.ಕೋಟಿ ವೆಚ್ಚದ ಆಸ್ಟ್ರೋ ಟರ್ಫ್ ಮೈದಾನದ ಹೆಚ್ಚುವರಿ ಕಾಮಗಾರಿಗೆ ಭೂಮಿ ಪೂಜೆ

May 18, 2026 - 11:20
 0  203
ಕೂಡಿಗೆ : ರೂ.3.ಕೋಟಿ ವೆಚ್ಚದ ಆಸ್ಟ್ರೋ ಟರ್ಫ್  ಮೈದಾನದ ಹೆಚ್ಚುವರಿ  ಕಾಮಗಾರಿಗೆ ಭೂಮಿ ಪೂಜೆ

ಕುಶಾಲನಗರ : ತಾಲ್ಲೂಕಿನ ಕೂಡಿಗೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ರೂ.3 ಕೋಟಿ ವೆಚ್ಚದ ಆಸ್ಟ್ರೋಟರ್ಫ್ ಮೈದಾನದ ಹೆಚ್ಚುವರಿ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

 ಈ ಸಂದರ್ಭ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಕ್ರೀಡಾ ಶಾಲೆಗೆ ಅಯ್ಕೆಗೊಂಡ ನಂತರ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

 ಕ್ರೀಡಾಕೂಟಗಳಿಗೆ ಉತ್ತಮ ತರಬೇತಿಗಾಗಿ ಇಂತಹ ಮೈದಾನಗಳ ಅವಶ್ಯಕತೆ ಇದೆ.ಈ ಹಿನ್ನೆಲೆಯಲ್ಲಿ ಬ ರಾಷ್ಟ್ರೀಯ ಕ್ರೀಡಾ ನಿಯಮಾನುಸಾರ ಆಸ್ಟ್ರೋಟರ್ಫ್ ಮೈದಾನದ ಅಭಿವೃದ್ಧಿ ಕ್ರಮ ಕೈಗೊಳ್ಳಲಾಗಿದೆ ಎಂದರು.

 ರಾಜ್ಯ ಸರ್ಕಾರ ಕ್ರೀಡಾ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದೆ.ರೂ.3 ಕೋಟಿ ವೆಚ್ಚದಲ್ಲಿ ಕ್ರೀಡಾ ಶಾಲೆಯ ಕ್ರೀಡಾಂಗಣದ ಅಭಿವೃದ್ಧಿ ಪಡಿಸಲಾಗುವುದು.ಜೊತೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತಾನಾಡಿ, ಕ್ರೀಡಾ ವಸತಿ ಶಾಲೆಗಳ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವ ಮೂಲಕ ಕ್ರೀಡಾ ಶಾಲಾ ವಿದ್ಯಾರ್ಥಿಗಳ ಕ್ರೀಡೆ ಹಾಗೂ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದರು.

 ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ , ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸೋಮಶೇಖರ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಫಿಲೋಮಿನಾ, ಈರಪ್ಪ, ಚಂದ್ರ, ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯಪ್ರಕಾಶ್,ಕ್ರೀಡಾ ತರಬೇತಿದಾರರಾದ ವೆಂಕಟೇಶ್, ದಿನಾಮಣಿ, ಸುರೇಶ್, ಗುತ್ತಿಗೆದಾರ ಮಂಜುನಾಥ, ಶಾಲಾ ಮುಖ್ಯ ಶಿಕ್ಷಕಿ ಅಶ್ವಿತ್,ಶಿಕ್ಷಕರ ವೃಂದ, ಸೇರಿದಂತೆ ವಿವಿಧ ವಿಭಾಗದ ತರಬೇತಿದಾರರು, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0