ಕೂಡಿಗೆ:6 ಬೀದಿ ನಾಯಿಗಳಿಂದ ವ್ಯಕ್ತಿಯ ಮೇಲೆ ದಾಳಿ
admincoorgdaily

ಕೂಡಿಗೆ:ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಮುಂಭಾಗ ನಾಳೆ 17.08.2026 ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಒಂದಾಗಿ ಉಗ್ರ ಪ್ರತಿಭಟನೆ ನಡೆಸಲಿದ್ದಾರೆ.

ಇಂದು ಭಾನುವಾರ ಬೆಳಿಗ್ಗೆ 7 ಗಂಟೆಗೆ ಹೆಗ್ಗಡಹಳ್ಳಿ ಗ್ರಾಮದ ರಂಗಣ್ಣ ಎಂಬವರು ಮನೆ ಮುಂಭಾಗ ಕುಳಿತಿದ್ದ ವೇಳೆ 6 ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಈ ದಾಳಿಯಲ್ಲಿ ರಂಗಣ್ಣ ಅವರ ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಗಾಯಾಳು ರಂಗಣ್ಣ ಅವರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.