ಹಜ್ ಸೂಪರಿಂಟೆಂಡೆಂಟ್ ಆಗಿ ಕುಪ್ಪೋಡಂಡ ಎ.ರಫೀಕ್ ಆಯ್ಕೆ

Feb 17, 2026 - 12:14
 0  351
ಹಜ್ ಸೂಪರಿಂಟೆಂಡೆಂಟ್ ಆಗಿ ಕುಪ್ಪೋಡಂಡ ಎ.ರಫೀಕ್ ಆಯ್ಕೆ

ಮಡಿಕೇರಿ;ಮುಂಬರುವ 2026ರ ಹಜ್ ಕಾಲಾವದಿಯಲ್ಲಿ ಭಾರತದಿಂದ ಹಜ್ ಸೂಪರಿಂಟೆಂಡೆಂಟ್ ಆಗಿ ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸಲು ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ತನಿಖೆ ವಿಭಾಗದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ.ಪಿ.ಐ.) ಕೊಡಗಿನ ಕುಪ್ಪೋಡಂಡ ಎ. ರಫೀಕ್ ಅವರು ಆಯ್ಕೆಯಾಗಿದ್ದಾರೆ.

ಅಲ್ಲದೆ, ಇವರು ಈ ವರ್ಷ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಹಜ್ ಸೂಪರಿಂಟೆಂಡೆಂಟ್ ಆಗಿ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. ಪ್ರಸಕ್ತ ಹಜ್ ಅವಧಿಯಲ್ಲಿ ಇವರು ಮಕ್ಕಾ, ಮದೀನಾ ಮತ್ತು ಜಿದ್ದಾ ಸೇರಿದಂತೆ ಸೌದಿ ಅರೇಬಿಯಾದಲ್ಲಿ 3 ತಿಂಗಳ ಕಾಲ ನಿಯೋಜನೆ (ಡೆಪ್ಯುಟೇಶನ್) ಮೇರೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಈ ವಿಶೇಷ ಕರ್ತವ್ಯ ನಿರ್ವಹಣೆಗಾಗಿ ಇವರು ಮುಂದಿನ ತಿಂಗಳು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಹಜ್ಜ್ ವಿಭಾಗದಿಂದ ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತದಿಂದ ಆಯ್ಕೆಗೊಂಡ ಹಜ್ ಸೂಪರಿಂಟೆಂಡೆಂಟ್ ಗಳಿಗಾಗಿ  ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಗಾರದಲ್ಲಿ ಕುಪ್ಪೋಡಂಡ ಎ. ರಫೀಕ್ ಅವರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1