ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ ಕುಪ್ಪೋಡಂಡ ಎ. ರಫೀಕ್

Feb 11, 2026 - 00:15
 0  630
ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ ಕುಪ್ಪೋಡಂಡ ಎ. ರಫೀಕ್
ಎ.ರಫೀಕ್

ಬೆಂಗಳೂರು; ರಾಜ್ಯ ಪೊಲೀಸ್ ಇಲಾಖೆಯ ಅಧೀನದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿ. ಪಿ. ಐ.) ಕೊಡಗು ಮೂಲದ ಕುಪ್ಪೋಡಂಡ ಎ. ರಫೀಕ್ ಅವರು ಮುಂಬಡ್ತಿ ಹೊಂದಿದ್ದಾರೆ.

ಇದುವರೆಗಗೆ ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (ಡಿ.ಎಸ್.ಐ.) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಪ್ಪೋಡಂಡ ಎ. ರಫೀಕ್ ಅವರಿಗೆ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಸೌಮೇoದು ಮುಖರ್ಜಿ ಅವರು ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಕುಪ್ಪೋಡಂಡ ಎ. ರಫೀಕ್ ಅವರು ಮೂಲತಃ ಎಡಪಾಲ ಗ್ರಾಮದವರಾಗಿದ್ದು, ಕೆ.ಕೆ.ಅಹಮದ್ ಹಾಜಿಯವರ ಪುತ್ರರಾಗಿದ್ದಾರೆ. ಇವರು ಈ ಹಿಂದೆ ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0