ಕುಶಾಲನಗರ:ನೆರಳು, ಆಶ್ರಯ ನೀಡುತ್ತಿದ್ದ ವೃಕ್ಷಕ್ಕೆ ಕೊಡಲಿ ಪೆಟ್ಟು
ಕುಶಾಲನಗರ ಜೂ.22, ನಗರದ ಸರಕಾರಿ ಆಸ್ಪತ್ರೆ ಎದುರಿನ ಕನ್ನಡ ವೃತ್ತದಲ್ಲಿ ಅಂದಾಜು ಇಸವಿ 2002ರಲ್ಲಿ ಕಾರ್ಯಕ್ರಮ ಒಂದರ ನೆನಪಿನ ಉದ್ದೇಶದಿಂದ ನೆಡಲಾಗಿದ್ದ , ಇಂದಿನವರೆಗೂ ಪಕ್ಷಿಗಳಿಗೆ, ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರಿಗೆ, ದಾರಿ ಹೋಕರಿಗೆ ಭದ್ರ ನೆರಳಾಗಿದ್ದ ವೃಕ್ಷ ಇಂದು ತನ್ನ ಸ್ವರೂಪವನ್ನು ಕಳೆದುಕೊಂಡಿದೆ.
ವೃತ್ತದಲ್ಲಿ ಯೋಜಿತ ಕೆಲವು ಅಭಿವೃದ್ಧಿ ಕೆಲಸಗಳಿಗೆ ವೃಕ್ಷವು ಅಡಚಣೆಯಾಗುತ್ತಿದೆ ಎಂದು ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯವರು ವೃಕ್ಷವನ್ನು ತೆರವುಗೊಳಿಸಲು ಕೋರಿ ಪತ್ರ ಒಂದನ್ನು ಅರಣ್ಯ ಇಲಾಖೆಗೆ ಸಲ್ಲಿಸಿದ್ದು, ಇಂದು ವೃಕ್ಷದ ಬಹುತೇಕ ಭಾಗ ಕಡಿಯಲ್ಪಟ್ಟಿದೆ. ಇತ್ತೀಚಿನ ಪರಿಸರ ದಿನಾಚರಣೆ ನೆನಪಿನಿಂದ ಮಾಸುವ ಮುನ್ನವೇ ನಡೆದ ಈ ಘಟನೆಯಿಂದ ಪರಿಸರ ಪ್ರಿಯರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.
What's Your Reaction?
Like
0
Dislike
0
Love
1
Funny
0
Angry
0
Sad
3
Wow
0
