Kodagu

ಕುಶಾಲನಗರ: ಬೇಕರಿ ತಿನಿಸು ತಯಾರಕ ಮನೆಯಲ್ಲೇ ನೇಣಿಗೆ ಶರಣು

admincoorgdaily

ಕುಶಾಲನಗರ: ಬೇಕರಿ ತಿನಿಸು ತಯಾರಕ ಮನೆಯಲ್ಲೇ ನೇಣಿಗೆ ಶರಣು

ಕುಶಾಲನಗರ, ಜು.24 : ಕುಶಾಲನಗರ ಸಮೀಪದ ಕೂಡ್ಲೂರಿನ ಬಸವೇಶ್ವರ ಬಡಾವಣೆ ನಿವಾಸಿ ಬೇಕರಿ ತಿನಿಸುಗಳ ತಯಾರಿಕೆಯಲ್ಲಿ ತೊಡಗಿದ್ದ ವಿನೋದ್ (36) ಇಂದು ಮುಂಜಾನೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ,ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.