Kodagu

ಕುಶಾಲನಗರ: ಕುಸಿತದ ಭೀತಿಯಲ್ಲಿ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ

admincoorgdaily

ಕುಶಾಲನಗರ: ಕುಸಿತದ ಭೀತಿಯಲ್ಲಿ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ

ಕುಶಾಲನಗರ, ಜು.7: ಕುಶಾಲನಗರ ಭಾಗದಲ್ಲಿ ಮಳೆ ಚುರುಕುಗೊಂಡಿದ್ದು ನಗರದ ಸಾಯಿ ಬಡಾವಣೆಗೆ ತೆರಳುವ ಕಾಂಕ್ರೀಟ್ ರಸ್ತೆಯ ಆಯಕಟ್ಟಿನ ಜಾಗದಲ್ಲಿ ಕುಸಿತಗೊಳ್ಳುವ ಸ್ಥಿತಿಯಿದ್ದು, ಬಡಾವಣೆಯ ನಿವಾಸಿಗಳು ಆತಂಕ ಎದುರಿಸುವಂತಾಗಿದೆ.

ಬಡಾವಣೆಗೆ ತೆರಳುವ ಕಾಂಕ್ರೀಟ್ ರಸ್ತೆಯ ತಳಭಾಗದ ಕಲ್ಲು, ಮಣ್ಣು ಪಕ್ಕದ ಕಡಂಗಕ್ಕೆ ಜರಿತವಾಗಿದ್ದು ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಕಾಂಕ್ರೀಟ್ ರಿಟೇನಿಂಗ್ ಗೋಡೆ ನಿರ್ಮಾಣ ಮಾಡುವ ಮೂಲಕ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಡೆಯಬಹುದೆಂದು ಬಡಾವಣೆಯ ನಿವಾಸಿ, ಸಿವಿಲ್ ಇಂಜಿನಿಯರ್ ಎಂ.ಟಿ. ದರ್ಶನ್ ಮಾಧ್ಯಮದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.