ಕುಶಾಲನಗರ : ಚರಂಡಿಯಲ್ಲಿ ಮೃತದೇಹ ಪತ್ತೆ
admincoorgdaily

ಕುಶಾಲನಗರ, ಸೆ.2 : ಕುಶಾಲನಗರದ ಬಿ. ಎಂ ರಸ್ತೆ ಹೆದ್ದಾರಿ ಬದಿಯ ತಾವರೆಕೆರೆ ಬಳಿ ಚರಂಡಿಯೊಳಗೆ ಪುರುಷ ಮೃತದೇಹ ತೆರೆದ ಚರಂಡಿಯೊಳಗೆ ಬಿದ್ದಿರುವ ಸ್ಥಿತಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿ ಘಟನಾ ಸ್ಥಳದಿಂದ ಇನ್ನೂರು ಮೀಟರ್ ದೂರದಲ್ಲಿರುವ ಗುಂಡೂರಾವ್ ಬಡಾವಣೆಯ ನಿವಾಸಿ ಮಲ್ಲಪ್ಪ (73) ಎಂದು ತಿಳಿದುಬಂದಿದೆ. ರಾತ್ರಿ ಆಯತಪ್ಪಿ ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಘಟನಾ ಸ್ಥಳದ ಬಳಿಯಿರುವ ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಕುಶಾಲನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರ ತಿಳಿದು ಬರಲಿದೆ ಎಂದು ಆರಕ್ಷಕ ಮೂಲಗಳು ತಿಳಿಸಿವೆ.