ಕುಶಾಲನಗರ:ಶಾಲೆಯ ಗೇಟ್ ಬಿದ್ದು ನಾಲ್ಕು ವರ್ಷದ ಬಾಲಕಿ ದುರ್ಮರಣ

Aug 7, 2026 - 19:39
 0  658
ಕುಶಾಲನಗರ:ಶಾಲೆಯ ಗೇಟ್ ಬಿದ್ದು ನಾಲ್ಕು ವರ್ಷದ ಬಾಲಕಿ ದುರ್ಮರಣ

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಹಾಡಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆಯ ಸಮೀಪ ಇರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುವ ತನ್ನ ಅಕ್ಕನನ್ನು ಕರೆದೊಯ್ಯಲು ಬಾಲಕಿ ಪ್ರತಿ ದಿನ ಗೇಟ್ ಬಳಿ ಬರುವುದು ವಾಡಿಕೆ ಎನ್ನಲಾಗಿದೆ.

ಈ ಸಂದರ್ಭ ಬೃಹತ್ ಕಬ್ಬಿಣದ ಗೇಟ್ ಹಾಗೂ ಕಾಂಪೌಂಡ್ ಕಳಚಿ ಬಿದ್ದು ಬಾಲಕಿ ತಲೆ ಮೇಲೆ ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎನ್ನಲಾಗಿದೆ. ಈಕೆ ಸತೀಶ್ ಮತ್ತು ಪವಿತ್ರ ದಂಪತಿಯ ಪುತ್ರಿಯಾಗಿದ್ದು, ಈ ದುರ್ಘಟನೆ ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 5
Wow Wow 0