ಕುಶಾಲನಗರ: ಪ್ರವಾಸಿಗರ ವಾಹನಗಳ ಶಬ್ದ ಮಾಲಿನ್ಯ, ಚಾಲಕರಿಗೆ ಬಿತ್ತು ದಂಡ

ಕುಶಾಲನಗರ: ಪ್ರವಾಸಿಗರ ವಾಹನಗಳ  ಶಬ್ದ ಮಾಲಿನ್ಯ, ಚಾಲಕರಿಗೆ ಬಿತ್ತು ದಂಡ

ಕೂಡಿಗೆ: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹಿಂತಿರುಗುವ ಸಂದರ್ಭದಲ್ಲಿ ವಿವಿಧ ಪ್ರವಾಸಿಗರ ವಾಹನಗಳಲ್ಲಿ ವಿಪರೀತ ಶಬ್ದ ಮಾಲಿನ್ಯ ವಾಗತ್ತಿದ್ದ ಕೇರಳದ ಪ್ರವಾಸಿ ಬಸ್ ಗಳನ್ನು ಪೋಲಿಸ್ ತಡೆದು ದಂಡ ವಿಧಿಸಿ ಪ್ರಸಂಗ ಕುಶಾಲನಗರದಲ್ಲಿ ನಡೆದಿದೆ.

 ಕುಶಾಲನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿ ನಗರದ ಮುಖ್ಯ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ಹೆಚ್ಚು ಶಬ್ದ ಮಾಲಿನ್ಯ ಮಾಡಿದ ವಾಹನಗಳನ್ನು ಕುಶಾಲನಗರ ಸಂಚಾರಿ ಪೋಲಿಸ್ ಅಧಿಕಾರಿ ವರ್ಗದವರು ಪತ್ತೆ ಹಚ್ಚಿ ಚಾಲಕರಿಗೆ ಸ್ಧಳದಲ್ಲಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿರುವುದು ಕಂಡುಬರುತ್ತಿದೆ.