ಕುಶಾಲನಗರ; ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಕುಶಾಲನಗರ,ಫೆ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಎಸ್.ಎಲ್.ಎನ್ ಕಾಫಿ ಎಂಪ್ಲಾಯೀಸ್ ಯೂನಿಯನ್ ಹಾಗೂ ಮೈಸೂರು ವಿಭಾಗದ ಕೈಗಾರಿಕಾ ಕಾರ್ಮಿಕ ಯೂನಿಯನ್ ಸಹಯೋಗದೊಂದಿಗೆ ಕೇಂದ್ರ ಸರ್ಕಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾಯಿದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕುಶಾಲನಗರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಕೈಗಾರಿಕಾ ಕೇಂದ್ರದಿಂದ ಕುಶಾಲನಗರ ತಾಲ್ಲೂಕು ತಹಶಿಲ್ದಾರರ ಕಚೇರಿಯವರೆಗೆ ಮೆರವಣಿಗೆ ಸಾಗಿದರು. ನಂತರ ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ತಹಶಿಲ್ದಾರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯ ಮೆರವಣಿಗೆಯಲ್ಲಿ ಎಸ್.ಎಲ್.ಎನ್ ಕಾಫಿ ಎಂಪ್ಲಾಯೀಸ್ ಯೂನಿಯನ್ ನ ಐವತ್ತಕ್ಕೂ ಹೆಚ್ಚು ಕಾರ್ಮಿಕರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳ ಭಿತ್ತಿಪತ್ರಗಳನ್ನು ಇಡಿದು ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭದಲ್ಲಿ ಎ.ಐ.ಟಿ.ಯು.ಸಿ ಮೈಸೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಜೆ. ಸೋಮಶೇಖರ್ ಅರಸ್, ರಾಜ್ಯ ಸಮಿತಿ ಕಾರ್ಯದರ್ಶಿ ಹೆಚ್.ಬಿ.ರಾಮಕೃಷ್ಣ, ಎಸ್.ಎಲ್.ಎನ್ ಘಟಕದ ಅಧ್ಯಕ್ಷ ಎಸ್.ಶಿವರಾಘವೇಂದ್ರ, ಡಿ.ಆರ್. ರವಿತೇಜ, ಎಸ್.ಆರ್.ಲೋಕೇಶ್, ಉಪ ಕಾರ್ಯದರ್ಶಿ ಕೆ.ಯು .ನವೀನ್, ಖಜಾಂಚಿ ಪ್ರದೀಪ್ ಕುಮಾರ್ ಹಾಗೂ ಇನ್ನಿತರರು ಇದ್ದರು.