ಕುಶಾಲನಗರ:ಅಪಘಾತದಲ್ಲಿ ಗಾಯಗೊಂಡ ಜಿಂಕೆಯ ರಕ್ಷಣೆ
ಕುಶಾಲನಗರ:ಅಪರಿಚಿತ ವಾಹನದಿಂದಾಗಿ ಅಪಘಾತಕ್ಕೀಡಾದ ಜಿಂಕೆಗೆ ಸ್ಥಳದಲ್ಲಿದ್ದವರು ಆರೈಕೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ಇಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕುಶಾಲನಗರ ಕಾವೇರಿ ನಿಸರ್ಗಧಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಜಿಂಕೆಯು ಕಾವೇರಿ ನಿಸರ್ಗಧಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಧಾವಿಸಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಲಾಯನ ಮಾಡಿದೆ. ಇದರಿಂದ ಗಾಯಗೊಂಡ ಜಿಂಕೆಗೆ ಸ್ಥಳದಲ್ಲಿದ್ದವರು ಆರೈಕೆ ಮಾಡಿ ಅದರ ಜೀವ ಉಳಿಸುವ ಮೂಲಕ ಮಾನವೀಯತೆ ಮೆರೆದರು.
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರಿಗೆ ಜಿಂಕೆಯನ್ನು ಸುರಕ್ಷಿತವಾಗಿ ಒಪ್ಪಿಸಲಾಯಿತು. ಸ್ಥಳೀಯರ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
