ಕುಶಾಲನಗರ : ಆಂಗ್ಲಭಾಷೆಯಲ್ಲಿ ಅಂಗಡಿ ಬ್ಯಾನರ್ : ಕರವೇ ಕಾರ್ಯಕರ್ತರಿಂದ ತೆರವು

Feb 24, 2026 - 10:59
 0  791
ಕುಶಾಲನಗರ : ಆಂಗ್ಲಭಾಷೆಯಲ್ಲಿ ಅಂಗಡಿ ಬ್ಯಾನರ್ : ಕರವೇ ಕಾರ್ಯಕರ್ತರಿಂದ ತೆರವು

ಕುಶಾಲನಗರ : ಪಟ್ಟಣದ ರಥಬೀದಿಯಲ್ಲಿ ಬಟ್ಟೆ ಅಂಗಡಿಗೆ ಸಂಬಂಧಿಸಿದ ಬ್ಯಾನರ್ ಸಂಪೂರ್ಣ ಆಂಗ್ಲ‌ಭಾಷೆಯಲ್ಲಿರುವುದನ್ನು ಗಮನಿಸಿದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಮತ್ತು ಪ್ರಮುಖರು ಬ್ಯಾನರ್ ಅನ್ನು ಸೋಮವಾರ ತೆರವುಗೊಳಿಸಿದರು.

ಕನ್ನಡ ಕಡ್ಡಾಯವಾಗಿ ಬಳಸಬೇಕಿದೆ ಎಂದು ಸರ್ಕಾರದ ಸೂಚನೆಯಿದ್ದರೂ ಕೂಡ‌ ಕೂಡ ಕನ್ನಡ‌ ಭಾಷೆ ಬಳಕೆಗೆ ಕನ್ನಡಿಗರು ಅಸಡ್ಡೆ ತೋರುತ್ತಿರುವ ಬಗ್ಗೆ ಅಂಗಡಿ ಮಾಲೀಕರನ್ನು ಕರವೇ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಪುರಸಭೆ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಂಡು ದಂಡ ವಿಧಿಸಬೇಕಿದೆ. ಆಂಗ್ಲಭಾಷೆ ಬಳಕೆ ವಿರುದ್ದ ಹಲವು ಬಾರಿ ಹೋರಾಟ ನಡೆಸಿದರು ಜನತೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ವಿಷಾದವಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಡಾ.ಬಿ.ಎ.ದಿನೇಶ್ ಶೆಟ್ಟಿ ಆಗ್ರಹಿಸಿದರು.

 ಈ ಸಂದರ್ಭ ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ನಾಗರಾಜ್, ತಾಲೂಕು ಸಂಚಾಲಕ ರಂಗಸ್ವಾಮಿ, ತಾಲೂಕು ಸಹ ಕಾರ್ಯದರ್ಶಿ ಕಾರ್ತಿಕ್ ಭಾಗವಹಿಸಿದ್ದರು. ಕುಶಾಲನಗರದ ರಥಬೀದಿಯಲ್ಲಿ ಬಟ್ಟೆ ಅಂಗಡಿಗೆ ಸಂಬಂಧಿಸಿದ ಬ್ಯಾನರ್ ಸಂಪೂರ್ಣ ಆಂಗ್ಲ‌ಭಾಷೆಯಲ್ಲಿರುವುದನ್ನು ಗಮನಿಸಿದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಮತ್ತು ಪ್ರಮುಖರು ಬ್ಯಾನರ್ ಅನ್ನು ತೆರವುಗೊಳಿಸಿದರು.

What's Your Reaction?

Like Like 2
Dislike Dislike 0
Love Love 1
Funny Funny 2
Angry Angry 2
Sad Sad 0
Wow Wow 0