Kodagu

ಕುಶಾಲನಗರ: ಬೀದಿ ನಾಯಿಗಳ ದಾಳಿಗೆ ಎರಡು ಕುರಿ ಬಲಿ

admincoorgdaily

ಕುಶಾಲನಗರ: ಬೀದಿ ನಾಯಿಗಳ ದಾಳಿಗೆ ಎರಡು ಕುರಿ ಬಲಿ

ಕುಶಾಲನಗರ: ಇಲ್ಲಿನ ಇಂದಿರಾ ಬಡಾವಣೆಯಲ್ಲಿ ಬೀದಿ ನಾಯಿಗಳ ದಾಳಿಗೆ ಎರಡು ಕುರಿಗಳು ಮೃತಪಟ್ಟಿವೆ. ಇಂದಿರಾ ಬಡಾವಣೆಯ ಖಲೀಲ್ ಎಂಬುವರಿಗೆ ಸೇರಿದ ಕುರಿಗಳ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿವೆ.

ಮೃತ ಕುರಿಗಳ ಮೌಲ್ಯ ಸುಮಾರು ₹20 ಸಾವಿರ ಎಂದು ಅಂದಾಜಿಸಲಾಗಿದೆ. "ಸಾಕಿದ ಕುರಿಗಳನ್ನು ನಾಯಿಗಳು ಕೊಂದುಹಾಕಿವೆ. ತುಂಬಾ ನಷ್ಟವಾಗಿದೆ" ಎಂದು ಕುರಿ ಮಾಲೀಕ ಖಲೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಅಂಬೇಡ್ಕರ್ ಜನಪರ ವೇದಿಕೆಯ ಅಧ್ಯಕ,  ಆದಂ,"ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಮಕ್ಕಳು ಹೊರಗೆ ಆಟವಾಡಲು, ಶಾಲೆಗೆ ಹೋಗಲು ಭಯಪಡುವಂತಾಗಿದೆ. ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.