ಕುಶಾಲನಗರ: ಗಣಪತಿ ದೇವಸ್ಥಾನದ ಮುಂದೆ ಯುಜಿಡಿ ಕಾಮಗಾರಿ, ಸಾರ್ವಜನಿಕರು ಹೈರಾಣ
ಕುಶಾಲನಗರ, ಜೂನ್ 29: ಪಟ್ಟಣದ ಹೃದಯಭಾಗದ ಗಣಪತಿ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ -ಯುಜಿಡಿ ಕಾಮಗಾರಿಯಿಂದ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ಜೆಸಿಬಿ, ಡ್ರಿಲ್ಲಿಂಗ್ ಯಂತ್ರಗಳ ಮೂಲಕ ಹಗಲು-ರಾತ್ರಿ ಕಾಮಗಾರಿ ನಡೆಯುತ್ತಿದ್ದು, ನಿರಂತರ ಶಬ್ದದಿಂದ ರಸ್ತೆ ಪಕ್ಕದ ಆಸ್ಪತ್ರೆಯ ರೋಗಿಗಳು, ಮೆಡಿಕಲ್ ಶಾಪ್, ದಿನಸಿ ಅಂಗಡಿ, ಹೋಟೆಲ್ ವ್ಯಾಪಾರಸ್ಥರಿಗೆ ಕಿರಿಕಿರಿಯಾಗಿದೆ. ಧೂಳು ಹಾರಾಟದಿಂದ ಗ್ರಾಹಕರು ಅಂಗಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದು, ವ್ಯಾಪಾರ ಕುಸಿದಿದೆ ಎಂದು ಮಳಿಗೆ ಮಾಲೀಕರು ದೂರಿದ್ದಾರೆ.
"ರಾತ್ರಿ ಮಾಡಬೇಕಾದ ಕಾಮಗಾರಿಯನ್ನು ಹಗಲಿನಲ್ಲಿ ಮಾಡುತ್ತಿರುವುದರಿಂದ ಶಾಲಾ ಮಕ್ಕಳು, ವೃದ್ಧರು, ರೋಗಿಗಳಿಗೆ ತೊಂದರೆ. ರಸ್ತೆ ಸಂಪೂರ್ಣ ಅಗೆದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಧೂಳು ತಡೆಗೆ ನೀರು ಹಾಕುತ್ತಿಲ್ಲ, ಪರ್ಯಾಯ ವ್ಯವಸ್ಥೆಯೂ ಇಲ್ಲ" ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯ ನೂರಾರು ಭಕ್ತರು ಬರುವ ಗಣಪತಿ ದೇವಸ್ಥಾನದ ಮುಂಭಾಗವೇ ರಸ್ತೆ ಅಗೆದಿರುವುದರಿಂದ ವೃದ್ಧರು, ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಪರದಾಡುತ್ತಿದ್ದಾರೆ.
"ಕಾಮಗಾರಿ ಆರಂಭಕ್ಕೂ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ರಾತ್ರಿ ಕೆಲಸ ಮಾಡಿ ಹಗಲಿನಲ್ಲಿ ರಸ್ತೆ ಸುಗಮಗೊಳಿಸಬೇಕು ಎಂಬ ಬೇಡಿಕೆಯನ್ನು ಗುತ್ತಿಗೆದಾರರು ಕೇಳುತ್ತಿಲ್ಲ. ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು" ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
