ಕುಶಾಲನಗರ:ವಿನೋದ್ ನಾಪತ್ತೆಯಾಗಿ ಒಂದೂವರೆ ವರ್ಷ ಕಳೆದರೂ ಪತ್ತೆ ಇಲ್ಲ
ಕುಶಾಲನಗರ, ಜು.5: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಡಾ. ಸಿದ್ದಯ್ಯ ಪುರಾಣಿಕ್ ಲೇಔಟ್ ನಿವಾಸಿ ವಿನೋದ್ ಕುಮಾರ್.ಕೆ.ಕೆ (49)ರವರು ದಿನಾಂಕ 11.12.2024ರಂದು ಮನೆಯಿಂದ ತೆರಳಿ ಕಾಣೆಯಾಗಿದ್ದಾರೆ. ಈ ಸಂಬಂಧ ಕುಶಾಲನಗರ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಒಂದುವರೆ ವರ್ಷ ಕಳೆದರೂ ಇಂದಿಗೂ ಅವರ ಪತ್ತೆಯಾಗಿಲ್ಲ. ಈ ಸಂಬಂಧ ಕುಟುಂಬದವರು ದಿನನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು ಸಂಬಂಧಪಟ್ಟ ಪೊಲೀಸ್ ಇಲಾಖೆ ನನ್ನ ಮಗನನ್ನು ಪತ್ತೆಹಚ್ಚಿಕೊಡಿ ಎಂದು ಅವರ ತಾಯಿ ವಿನಂತಿಸುತ್ತಿದ್ದಾರೆ.
ಎಂತಹುದೇ ಕ್ಲಿಷ್ಟ ಪ್ರಕರಣಗಳಿದ್ದರೂ ಅದನ್ನು ಭೇದಿಸಿ ಯಶಸ್ವಿಯಾಗಿರುವ ಕೊಡಗು ಪೊಲೀಸರು ಈ ಕಾಣೆಯಾಗಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮುಂದಾಗಬೇಕಿದ್ದು ಆ ತಾಯಿಯ ಕೊರಗಿಗೆ ಇತಿಶ್ರೀ ಬರೆಯಬೇಕೆಂದು ಸ್ನೇಹಿತರು, ಸಂಬಂಧಿಕರು ಹಾತೊರೆಯುತ್ತಿದ್ದಾರೆ.
What's Your Reaction?
Like
2
Dislike
0
Love
0
Funny
0
Angry
0
Sad
2
Wow
0
