ಕುಶಾಲನಗರ: ಕಾಡಾನೆ ದಾಳಿ,ಬೆಳೆ ಹಾನಿ
ಕುಶಾಲನಗರ, ಜು.22: ಕುಶಾಲನಗರ ಸಮೀಪದ ಸೀಗೆಹೊಸೂರು ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಆ ಭಾಗದ ರೈತರ ಜಮೀನಿಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆಯನ್ನು ಹಾನಿಗೊಳಿಸಿದ ಘಟನೆ ವರದಿಯಾಗಿದೆ. ಬಾಣಾವರ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಜೇನುಕಲ್ಲು ಬೆಟ್ಟದ ತಪ್ಪಲಿನಿಂದ ಕಾಡಾನೆಗಳು ನುಗ್ಗಿಬರುತ್ತಿದ್ದು ಸ್ಥಳೀಯರ ಜಮೀನಿನಲ್ಲಿ ಬೆಳೆದಿದ್ದ ಶುಂಠಿ, ಸುವರ್ಣ ಗಡ್ಡೆ, ಸಿಹಿ ಗೆಣಸು ಮುಂತಾದ ಬೆಳೆಗಳನ್ನು ತಿಂದಿವೆ ಅಲ್ಲದೆ ಉಳಿದಂತೆ ಬಹಳಷ್ಟು ಹಾನಿಗೊಳಿಸಿವೆ. ಸ್ಧಳಕ್ಕೆ ಜನಪ್ರತಿನಿಧಿಗಳು, ಹೆಬ್ಬಾಲೆ ವಲಯ ಉಪಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
