ಕುಶಾಲನಗರ: ಹೊಲದಿಂದಲೇ ಶುಂಠಿ ಕಿತ್ತು ಕದ್ದೊಯ್ದ ಖದೀಮರು

Jul 29, 2026 - 18:43
 0  291
ಕುಶಾಲನಗರ:  ಹೊಲದಿಂದಲೇ ಶುಂಠಿ ಕಿತ್ತು ಕದ್ದೊಯ್ದ ಖದೀಮರು

ಕುಶಾಲನಗರ, ಜು.29 : ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿಯ ಕಲ್ಲುಕೋರೆ ಬಳಿ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ಮಂಗಳವಾರ ಮಧ್ಯರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಕಳ್ಳರು ಸುಮಾರು ನಾಲ್ಕರಿಂದ ಐದು ಚೀಲಗಳಷ್ಟನ್ನು ನೆಲದೊಳಗಿಂದಲೇ ಕಿತ್ತೊಯ್ದಿದ್ದಾರೆ.

 

ಗುತ್ತಿಗೆ ಆಧಾರದ ಮೇಲೆ ಲಕ್ಷ್ಮಣ ಎಂಬುವರು ಲಕ್ಷಾಂತರ ರೂಪಾಯಿ ವ್ಯಯಿಸಿ ಶುಂಠಿ ವ್ಯವಸಾಯ ಮಾಡಿದ್ದು ಬೆಳೆ ಕೈಗೆ ಬರಬೇಕಾಗಿದ್ದ ಸಂದರ್ಭ ಅದು ಭಾಗಶ: ಕಳ್ಳರ ಪಾಲಾಗಿರುವುದು ವಿಷಾದನೀಯ . ಈ ಘಟನೆಯ ಬಗ್ಗೆ ಲಕ್ಷ್ಮಣ ರವರು ಕೂಡುಮಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಕಳ್ಳರ ಪತ್ತೆಗಾಗಿ ಕಾರ್ಯಾಚರಣೆಗಿಳಿದ್ದಾರೆ ಎಂದು ತಿಳಿದುಬಂದಿದೆ.

ವರದಿ: ಶ್ರೀಧರ್ ನಾರಾಯಣ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0