Kodagu

ಕುಶಾಲನಗರ : ಕೂಡ್ಲೂರು ಬಳಿ ರಸ್ತೆ ಅಪಘಾತದಲ್ಲಿ ಯುವಕ ಸಾವು

admincoorgdaily

ಕುಶಾಲನಗರ : ಕೂಡ್ಲೂರು ಬಳಿ ರಸ್ತೆ ಅಪಘಾತದಲ್ಲಿ ಯುವಕ ಸಾವು

ಕುಶಾಲನಗರ, ಜು.23, ನಿನ್ನೆ ಸಂಜೆ ಸುಮಾರು 6:30 ಗಂಟೆಗೆ ಕೂಡ್ಲೂರು ಬಳಿ ಬೈಕ್ ಚಲಾಯಿಸುತ್ತಿದ್ದ ಯುವಕನೊಬ್ಬ ಪಿಕಪ್ ವಾಹನ ಒಂದಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಮೃತ ಕುಶಾಲನಗರದ ಜನತಾ ಕಾಲೋನಿಯ ನಿವಾಸಿ ಶಯನ್ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ ಸಂದರ್ಭ ಗಾಯಾಳುವನ್ನು ಮೈಸೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭ ಬಿಳಿಕೆರೆಯ ಬಳಿ ಅಸುನೀಗಿದ್ದಾರೆ ಎನ್ನಲಾಗಿದೆ. ಕುಶಾಲನಗರ ಸಂಚಾರಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.