ಕಟ್ಟಡದಿಂದ ಬಿದ್ದು ಕುಶಾಲನಗರದ ಪೈಂಟರ್ ದಾರುಣ ಸಾವು
ಕುಶಾಲನಗರ, ಜು.10 : ಕೆಲವು ದಿನಗಳ ಹಿಂದೆ ಪೇಂಟಿಂಗ್ ಕೆಲಸದ ನಿಮಿತ್ತ ಶ್ರೀರಂಗಪಟ್ಟಣಕ್ಕೆ ತೆರಳಿದ್ದ ಕುಶಾಲನಗರದ ಪೈಂಟರ್ ಒಬ್ಬರು ಶ್ರೀರಂಗಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡವೊಂದರ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ದುರ್ಘಟನೆ ಗುರುವಾರ ನಡೆದಿದೆ.
ಕುಶಾಲನಗರ ಸಮೀಪದ ಚಿಕ್ಕತ್ತೂರು ಗ್ರಾಮದ ಅರುಣ (45) ಮೃತ ದುರ್ದೈವಿಯಾಗಿದ್ದು ಮೃತ ಶರೀರವನ್ನು ಇಂದು ಕುಶಾಲನಗರಕ್ಕೆ ತರಲಾಗುವುದೆಂದು ಮೂಲಗಳಿಂದ ತಿಳಿದು ಬಂದಿದೆ. ಪೈಂಟರ್ ಅರುಣ ಪತ್ನಿ, ಪುತ್ರಿ , ಓರ್ವ ಪುತ್ರನನ್ನು ಅಗಲಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಶ್ರೀಧರ್ ನಾರಾಯಣ್
What's Your Reaction?
Like
0
Dislike
0
Love
1
Funny
0
Angry
0
Sad
3
Wow
0
