ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ "ಕಾಣದ ಕಾಡಲು" ಲೋಕಾರ್ಪಣೆ

Feb 23, 2026 - 17:10
Feb 23, 2026 - 17:10
 0  997
ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ "ಕಾಣದ ಕಾಡಲು" ಲೋಕಾರ್ಪಣೆ

ಪೊನ್ನಂಪೇಟೆ; ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಎ.ಟಿ.ಮಂಜುನಾಥ್ ರಚಿತ ಚೊಚ್ಚಲ ಕೃತಿ "ಕಾಣದ ಕಾಡಲು" ಲೋಕಾರ್ಪಣೆ ಗೊಂಡಿದೆ.

 ಪೊನ್ನಂಪೇಟೆ ತಾಲ್ಲೂಕು ಹಾಗೂ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಆವರಣದಲ್ಲಿ ನಡೆದ ದಿ.ಗಂಗಾಧರ್ ಶೆಟ್, ಸುಲೋಚನಾ ದತ್ತಿ ಮತ್ತು ದಿ.ಎನ್ ಮಹಾಬಲೇಶ್ವರ ಭಟ್ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕಾಣದ ಕಾಡಲು ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭ ಮಾತನಾಡಿದ ಕೃತಿಯ ಲೇಖಕ ಮಂಜುನಾಥ್, ಕೆಲಸದ ಒತ್ತಡದ ನಡುವೆಯು ಸಣ್ಣ ಪ್ರಯತ್ನ ಮಾಡಲಾಗಿದ್ದು, ಕಾಣದ ಕಡಲು ಎಂಬ ಕಥಾ ಸಂಕಲನದಲ್ಲಿ ಸುಮಾರು 65 ಸಣ್ಣ ಕಥೆಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಲಾಗಿದೆ. ಪ್ರೀತಿ, ಪ್ರೇಮ ಹಾದಿಯಲ್ಲಿ ಅಪ್ಪ-ಅಮ್ಮ ತಂಗಿ, ಅಕ್ಕ ಮತ್ತು ತಮ್ಮನ ಮೇಲೆ ಪ್ರೀತಿ ಇರುತ್ತದೆ.

ಆದರೆ ನನ್ನ ಜೀವನದ ಕಾಲೇಜಿನ ದಿನಗಳಲ್ಲಿ ತಾನು ಇಷ್ಟಪಟ್ಟ ಹುಡುಗಿಯೊಂದಿಗೆ ಪ್ರೀತಿ ಹೇಳಿಕೊಳ್ಳಲಾಗದೆ ಆಕೆ ದೂರ ಆದ ಸಂದರ್ಭದಲ್ಲಿ ಅಂದು ಬರೆಯಲು ಆರಂಭಿಸಿದ ಬರವಣಿಗೆ ಇಂದು ನಿರಂತರವಾಗಿ ಬರೆಯುವಂತೆ ಮಾಡಿತು.

 ಪುಸ್ತಕ ಬಿಡುಗಡೆಗೆ ಯುವರಾಜ ಕಾಲೇಜಿನ ಸಹಾಯ ಉಪನ್ಯಾಸಕಿ ತಿತೀರ ರೇಖಾ ವಸಂತ್, ಮೈಸೂರಿನ ಅಮಿತ್ ಪ್ರಕಾಶನ ಮತ್ತು ತಾರಾ ಪ್ರಿಂಟರ್ ಅವರು ಸಹಕರಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಶ್ರೀ ಜಯಲಕ್ಷ್ಮಿ ಜ್ಯುವೆಲರಿ ಗೋಣಿಕೊಪ್ಪಲಿನ ದತ್ತಿದಾನಿಗಳಾದ ಎಂ.ಜಿ.ಮೋಹನ್ ಸಾಹಿತಿ ನಿವೃತ್ತ ಪ್ರಾಂಶುಪಾಲರಾದ ಡಾ.ಜೆ ಸೋಮಣ್ಣ, ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಂದನ ಮಂಜುನಾಥ್ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಗದೀಶ್ ಜೋಡಿ ಬಿಟಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದಾಯರಾದ ಕುಮಾರ್, ಸರಕಾರಿ ಪ್ರೌಢಶಾಲೆಯ ಮಹೇಶ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ಮತ್ತು ಗೋಣಿಕೊಪ್ಪಲ್ಲಿನ ಸದಸ್ಯರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.

What's Your Reaction?

Like Like 3
Dislike Dislike 1
Love Love 1
Funny Funny 0
Angry Angry 0
Sad Sad 0
Wow Wow 1