ಸಂತ ಅನ್ನಮ್ಮ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭೋತ್ಸವ

Jun 2, 2026 - 16:33
 0  361
ಸಂತ ಅನ್ನಮ್ಮ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭೋತ್ಸವ

ಸಿದ್ದಾಪುರ:- ಸಿದ್ದಾಪುರದ ಸಂತ ಅನ್ನಮ್ಮ ಶಾಲೆ (ಸಿಬಿಎಸ್‌ಇ)ಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮವು ಮಂಗಳವಾರ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಶಾಲೆಯ  ವ್ಯವಸ್ಥಾಪಕಿ ಹಾಗೂ ಪ್ರಾಂಶುಪಾಲರಾದ ರೆವ. ಸಿಸ್ಟರ್ ಮಾರ್ಜರಿ ಉದ್ಘಾಟಿಸಿ ಮಾತನಾಡಿ, ಮಕ್ಕಳ ಶಿಕ್ಷಣದ ಅಡಿಪಾಯವು ಬಾಲ್ಯದಲ್ಲಿಯೇ ರೂಪುಗೊಳ್ಳುತ್ತದೆ. ಶಾಲೆಯ ಮೊದಲ ದಿನವು ಮಕ್ಕಳ ಜೀವನದಲ್ಲಿ ಮಹತ್ವದ ಘಟ್ಟವಾಗಿದ್ದು, ಆಟ, ಪಾಠ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆ ಒತ್ತು ನೀಡಲಿದೆ ಎಂದು ಹೇಳಿದರು. ಹೊಸ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಶಾಲೆಯ ಶಿಕ್ಷಕ ವೃಂದವು ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮೂಲಕ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು. ಪೋಷಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ನರ್ಸರಿ ವಿಭಾಗದ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಕ್ರೆಸೆನ್ಸ್, ಸಂತ ಅನ್ನಮ್ಮ ಕಾನ್ವೆಂಟ್ ಶಾಲೆಯ ಪ್ರತಿನಿಧಿ ರೆವ. ಸಿಸ್ಟರ್ ಗ್ರೇಸ್ ಲಿಮಾ,ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲರು ರೆವ. ಸಿಸ್ಟರ್ ಅರ್ಪಿತಾ,ನಿರ್ವಹಣಾ ಸಮಿತಿಯ ರೆವ. ಸಿಸ್ಟರ್ ಸಿಲ್ವಿಯಾ ರೊಡ್ರಿಗಸ್,ಕಲಾವಿದ ಭಾವ ಮಾಲ್ದಾರೆ,ಶಿಕ್ಷಕಿ ರಾದ ಲೆನಿ, ಸುನೀತಾ, ತೆರೇಸಾ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಹೊಸ ಶೈಕ್ಷಣಿಕ ವರ್ಷದ ಆರಂಭವು ಸಂತಸ ಮತ್ತು ಉತ್ಸಾಹದ ವಾತಾವರಣದಲ್ಲಿ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0