ಪಲ್ಸ್ ಪೋಲಿಯೊ ಮನೆ ಮನೆ ಭೇಟಿ ಕೊನೆ ದಿನ: ಮಡಿಕೇರಿಗೆ DD ಭೇಟಿ

ಪಲ್ಸ್ ಪೋಲಿಯೊ ಮನೆ ಮನೆ ಭೇಟಿ ಕೊನೆ ದಿನ: ಮಡಿಕೇರಿಗೆ DD ಭೇಟಿ

ಮಡಿಕೇರಿ:ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಮನೆ ಮನೆ ಬೇಟಿ ಮಾಡುವ ಕೊನೆಯ ದಿನವಾದ ಇಂದು ಮಡಿಕೇರಿ ಪಟ್ಟಣದ ಮಂಗಳ ದೇವಿ ನಗರ, ಜಿ.ಟಿ.ರಸ್ತೆ ಮತ್ತು ಸ್ಟುವಟ್೯ ಸುತ್ತಮುತ್ತಲಿನ ಸ್ಥಳಗಳಿಗೆ ಡಾ.ರವಿ ನೋಡಲ್ ಅಧಿಕಾರಿಗಳು ಕೊಡಗು ಜಿಲ್ಲೆ ಹಾಗೂ ಮಾನ್ಯ ಉಪ ನಿರ್ದೇಶಕರು ಆರೋಗ್ಯ ಮತ್ತು ಕು.ಕ ಸೇವೆಗಳ ನಿರ್ದೇಶನಾಲಯ ಬೆಂಗಳೂರು ಹಾಗೂ ಡಾ.ಸನತ್ ಕುಮಾರ್ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಹಾಗೂ ಪ್ರಭಾರೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಬೇಟಿ ಮಾಡಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡಿ‌ದರು ಮತ್ತು ಸೂಕ್ತ ಮಾರ್ಗದರ್ಶನ ನೀಡಿದರು.

ಇವರೊಂದಿಗೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಹಾಗೂ ನಿಲಿಮ್ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ನಗರ ಆರೋಗ್ಯ ಕೇಂದ್ರದ ದಿವ್ಯ ಪ್ರಾಥಮಿಕ ಆರೋಗ್ಯ ಸುರಕ್ಷಾದಿಕಾರಿಗಳು, ಮೆಡಿಕಲ್ ವಿದ್ಯಾರ್ಥಿಗಳು ಹಾಜರಿದ್ದರು.