Kodagu

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣಗೆ ಸಚಿವ ಸ್ಥಾನ ನೀಡಲು ವಕೀಲರ ಸಂಘ ಒತ್ತಾಯ

admincoorgdaily

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣಗೆ ಸಚಿವ ಸ್ಥಾನ ನೀಡಲು ವಕೀಲರ ಸಂಘ ಒತ್ತಾಯ

ವಿರಾಜಪೇಟೆ, ಜೂ. 22: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಎ.ಎಸ್. ಪೊನ್ನಣ್ಣ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ವಿರಾಜಪೇಟೆ ವಕೀಲರ ಸಂಘ ಆಗ್ರಹಿಸಿದೆ.

 ವಿರಾಜಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ, ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಶಾಸಕ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.

ವಕೀಲ ಪ್ರದುಮ್ನ ಮಾತನಾಡಿ, ಕೊಡಗು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಕೋರಿದರು. ಹಿರಿಯ ವಕೀಲ ಬೊಳ್ಳಚಂಡ ಸೋಮಣ್ಣ, ಪೊನ್ನಣ್ಣ ಅವರಿಗೆ ರಾಜ್ಯ ಕಾನೂನು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಚೋವಂಡ ಪೊನ್ನಣ್ಣ, ಆಜೀರಾ ಶರೀಫ್, ನಜುಬಿದ್ದೀನ್, ಕೊಚವಂಡ ನಾಚಪ್ಪ, ಕಾವ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.