ವಿಧಾನಪರಿಷತ್ ಚುನಾವಣೆ:ಕಾಂಗ್ರೆಸ್ ಐದು ಅಭ್ಯರ್ಥಿಗಳಿಗೆ ಜಯ: ಬಿಜೆಪಿ ಇಬ್ಬರಿಗೆ ಗೆಲುವು:ಕ್ರಾಸ್ ವೋಟಿಂಗ್ ಕಾಂಗ್ರೆಸ್ ಐದನೇ ಅಭ್ಯರ್ಥಿಗೆ ಭರ್ಜರಿ ಗೆಲುವು

Jun 18, 2026 - 19:09
 0  1k
ವಿಧಾನಪರಿಷತ್ ಚುನಾವಣೆ:ಕಾಂಗ್ರೆಸ್ ಐದು ಅಭ್ಯರ್ಥಿಗಳಿಗೆ ಜಯ:  ಬಿಜೆಪಿ ಇಬ್ಬರಿಗೆ ಗೆಲುವು:ಕ್ರಾಸ್ ವೋಟಿಂಗ್ ಕಾಂಗ್ರೆಸ್ ಐದನೇ ಅಭ್ಯರ್ಥಿಗೆ ಭರ್ಜರಿ ಗೆಲುವು

ಬೆಂಗಳೂರು, ಜೂನ್ 18*: ವಿಧಾನ ಪರಿಷತ್ ಚುನಾವಣೆಯಲ್ಲಿ ಅಂಕಗಣಿತವೇ ರಾಜಕೀಯವನ್ನು ಬದಲಿಸಿತು. ಗೆಲುವಿಗೆ 27.63 ಮತ ಬೇಕಿದ್ದರೂ ಕೇವಲ 27 ಮತ ಪಡೆದ ಬಿಜೆಪಿ ಅಭ್ಯರ್ಥಿ ಲಿಂಗರಾಜು ಪಾಟೀಲ್ ಗೆದ್ದರು. ಆದರೆ 14 ಮತಕ್ಕೆ ಕುಸಿದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋತರು.

ಇದಕ್ಕೆಲ್ಲಾ ಕಾರಣ "ಕ್ರಾಸ್ ವೋಟಿಂಗ್". ಬಿಜೆಪಿಯ 4 ಮತ್ತು ಜೆಡಿಎಸ್‌ನ 7 ಶಾಸಕರು ಪಕ್ಷದ ವರಿಷ್ಠರ ಮಾತು ಕೇಳದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದರು. ಪರಿಣಾಮ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆದ್ದರು. ಕಾಂಗ್ರೆಸ್‌ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್‌ಗೆ 32 ಮತ ಬಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದರು.

222 ಮತ ಪೈಕಿ ಒಂದು ಮತ ಅಸಿಂಧುವಾಯಿತು. ನಂಬರ್ ತಪ್ಪಾಗಿ ಬರೆದ ಕಾರಣಕ್ಕೆ ಅದು ತಿರಸ್ಕಾರವಾಯಿತು. ರಾಜಕೀಯದಲ್ಲಿ ಅಂಕಗಣಿತ ಎಷ್ಟು ಮುಖ್ಯ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಯಿತು.

ಪೂರ್ಣ ಮತ ವಿವರ:

ಶ್ರೇಣಿ ಅಭ್ಯರ್ಥಿ ಪಕ್ಷ ಮತ ಸ್ಥಿತಿ

1 ವಿನಯ್ ಕಾರ್ತಿಕ್ ಕಾಂಗ್ರೆಸ್ 32 ಜಯ

2 ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ 30 ಜಯ

2 ತಿಪ್ಪಣ್ಣಪ್ಪ ಕಮಕನೂರು ಕಾಂಗ್ರೆಸ್ 30 ಜಯ

2 ಬಿ.ಎಸ್. ಶಿವಣ್ಣ ಕಾಂಗ್ರೆಸ್ 30 ಜಯ

5 ಪಿ.ವಿ. ಮೋಹನ್ ಕಾಂಗ್ರೆಸ್ 29 ಜಯ

6 ಆರ್. ರಘು ಬಿಜೆಪಿ 29 ಜಯ

7 ಲಿಂಗರಾಜು ಪಾಟೀಲ್ ಬಿಜೆಪಿ 27 ಜಯ

8 ಗೋವಿಂದರಾಜು ಜೆಡಿಎಸ್ 14 ಸೋಲು

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1