ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಸ್ಥಾಪನೆಯಾಗಿ ಜ.19ಕ್ಕೆ 70 ವರ್ಷ ಪೂರ್ಣ
admincoorgdaily

ಮಡಿಕೇರಿ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಸ್ಥಾಪನೆಯಾಗಿ ಜ.19ಕ್ಕೆ 70 ವರ್ಷ ಪೂರೈಸಲಿದ್ದು, ಎಲ್‌ಐಸಿಯಲ್ಲಿ ಹೂಡುವ ಜನರ ಉಳಿತಾಯವು ಸುರಕ್ಷಿತವಾಗಿರುತ್ತದೆ ಎಂದು ಎಲ್‌ಐಸಿಯ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ನಾಗೇಶ್ ತಿಳಿಸಿದರು.
1952ರ ಜು.1ರಂದು ಅಂದಿನ ಹಲವು ಖಾಸಗಿ ವಿಮಾಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ನೌಕರರು ಸ್ಥಾಪಿಸಿದ ಅಖಿಲ ಭಾರತ ವಿಮಾ ನೌಕರರ ಸಂಘ ವಿಮಾ ಉದ್ದಿಮೆ ರಾಷ್ಟ್ರೀಕರಣಗೊಳ್ಳಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಜನಾಂದೋಲನ ನಡೆಸಿತ್ತು.ಆ ನಂತರ 1956ರ ಜ.19ರಂದು ಜೀವ ವಿಮಾ ವಹಿವಾಟನ್ನು ರಾಷ್ಟ್ರೀಕರಣಗೊಳಿಸಿತು. ತದನಂತರದಲ್ಲಿ 1.9.1956 ರಂದು ಎಲ್‌ಐಸಿ ಅಸ್ತಿತ್ವಕ್ಕೆ ಬಂದಿತು. ಎಲ್‌ಐಸಿ ತನಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಲ್‌ಐಸಿಯ ಮೈಸೂರು ವಿಭಾಗದ ಜಂಟಿ ಕಾರ್ಯದರ್ಶಿ ಕಾಳಪ್ಪ, ಪ್ರಮುಖರಾದ ಅನಂತೇಶ್ ಸರಳಯ್ಯ,ಗಣೇಶ್ ಉಪಸ್ಥಿತರಿದ್ದರು.