ಅಸ್ಸಾಂ ಕಾರ್ಮಿಕರಿಂದ ನಮ್ಮನ್ನು ಮುಕ್ತಿಗೊಳಿಸುವಂತೆ ಸ್ಥಳೀಯ ಕಾರ್ಮಿಕರಿಂದ ಮನವಿ ಸಲ್ಲಿಕೆ
admincoorgdaily

ಶನಿವಾರಸಂತೆ:ಶನಿವಾರಸಂತೆ ಸುತ್ತಮುತ್ತ ಅಸ್ಸಾಂ ಮುಂತಾದ ವಲಸೆ ಕಾರ್ಮಿಕರ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಸ್ಥಳೀಯ ಮತ್ತು ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿರುವ ಇಲ್ಲಿನ ನೈಜ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದ್ದು ಜೀವನ ನಡೆಸಲು ಕಷ್ಟ ಆಗುತ್ತಿರುವ ಹಿನ್ನಲೆಯಲ್ಲಿ ಪಟ್ಟಣದ ಗುಂಡೂರಾವ್ ಬಡಾವಣೆಯ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರು ಅಸ್ಸಾಂ ಕಾರ್ಮಿಕರಿಂದ ನಮ್ಮನ್ನು ಮುಕ್ತಿಗೊಳಿಸುವಂತೆ ಶನಿವಾರಸಂತೆ ಪೊಲೀಸ್ ಠಾಣೆ, ಕಂದಾಯ ಇಲಾಖೆ, ಕಾರ್ಮಿಕರ ಇಲಾಖೆ, ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿಗೆ ತೆರಳಿ ದೂರು ನೀಡಿದ್ದಾರೆ.
ಗುಂಡೂರಾವ್ ಬಡಾವಣೆಯ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರು ನೀಡಿರುವ ದೂರಿನಲ್ಲಿ ನಮ್ಮ ಬಡಾವಣೆಯಲ್ಲಿ ನೆಲಸಿರುವ ಅಸ್ಸಾಂ ಕಾರ್ಮಿಕರಿಂದ ಇಲ್ಲಿನ ನಿವಾಸಿಗಳಾಗಿದ್ದು,ಕಾರ್ಮಿಕರಾಗಿ ದುಡಿಯುತ್ತಿರುವ ನಮಗೆ ಕೆಲಸ ಇಲ್ಲದಂತಾಗಿದೆ ಇದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ನಮ್ಮ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಸುಮಾರು 15 ಮಂದಿ ಅಸ್ಸಾಂ ಕಾರ್ಮಿಕರು ವಾಸ ಮಾಡುತ್ತಿದ್ದು ಇವರುಗಳು ರಸ್ತೆ ಬದಿಯಲ್ಲಿ ಗಲೀಜು ಮಾಡುವುದು, ರಾತ್ರಿ ಇಡಿ ರಸ್ತೆಯಲ್ಲಿ ಕಿರುಚಾಡುತ್ತಾ ತಿರುಗಾಡುವುದು, ಮಧ್ಯ ಸೇವಿಸಿ ಇಲ್ಲಿನ ಬಡಾವಣೆಯ ನಿವಾಸಿಗಳಿಗೆ ಬೈವುದು ಮತ್ತು ಇನ್ನಿತ್ತರ ಅಸಭ್ಯ ಚಟುವಟಿಕೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿರುವುದು ಇವುಗಳನ್ನು ಮನಗಂಡು ಪೊಲೀಸ್ ಇಲಾಖೆ, ಗ್ರಾ.ಪಂ.ಕಾರ್ಮಿಕರ ಇಲಾಖೆ ಅಧಿಕಾರಿಗಳು ಅಸ್ಸಾಂ ಕಾರ್ಮಿಕರಿಂದ ಮುಕ್ತಿಗೊಳಿಸುವಂತೆ ಸ್ಥಳೀಯ ಕಾರ್ಮಿಕರ ಪರವಾಗಿ ಕಾರ್ಮಿಕರಾದ ಪಾರ್ವತಿ, ಭಾಗ್ಯ, ಆಯಿಷಾ, ಅಸ್ಮಾ, ರಾಧ, ಶಿವರಾಜು, ರುದ್ರಮೂರ್ತಿ, ಶಶಾರದ, ದೇವಮ್ಮ, ಸಫಿಯಾ, ಅಶೋಕ್, ರಹಿಮತ್ ಮುಂತಾದ ಕಾರ್ಮಿಕರು ನೀಡಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.