Kodagu

ಕೊಡಗಿನ 3 ಕ್ರೀಡಾ ಶಾಲೆಗಳಲ್ಲಿ ಲೋಕಾಯುಕ್ತ ದಾಳಿ

admincoorgdaily

ಕೊಡಗಿನ 3 ಕ್ರೀಡಾ ಶಾಲೆಗಳಲ್ಲಿ ಲೋಕಾಯುಕ್ತ ದಾಳಿ

ಮಡಿಕೇರಿ: ಕೊಡಗು ಜಿಲ್ಲೆಯ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗಿನಿಂದಲೇ ಜಿಲ್ಲೆಯ ವಿವಿಧ ಕ್ರೀಡಾಶಾಲೆಗಳಲ್ಲಿ ಅಧಿಕೃತ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ತಂಡಗಳು ಜಿಲ್ಲೆಯ ಕೂಡಿಗೆ, ಮಡಿಕೇರಿ ಮತ್ತು ಪೊನ್ನಂಪೇಟೆ ಯಲ್ಲಿರುವ ಕ್ರೀಡಾಶಾಲೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿವೆ.