ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರಾದ ಐ.ಕೆ.ಪುಟ್ಟಸ್ವಾಮಿ ಅವರ ಕಛೇರಿ, ನಿವಾಸದ ಮೇಲೆ ಲೋಕಾಯುಕ್ತ ದಾಳಿ
ಕುಶಾಲನಗರ, ಏ 07:ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರ ಕಛೇರಿ, ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮಂಗಳವಾರ ಹಾಸನದ ವಿದ್ಯಾನಗರ ಸ್ವಂತ ಮನೆ, ಮೈಸೂರು ತಿಲಕ ನಗರ ಬಾಡಿಗೆ ಮನೆ, ಹಾರಂಗಿ ಅಣೆಕಟ್ಟೆ ಕಛೇರಿ, ಕುಶಾಲನಗರದ ವಿಭಾಗೀಯ ಕಛೇರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ತನಿಖೆ, ದಾಖಲೆ ಪರಿಶೋಧನೆ ನಡೆಯುತ್ತಿದೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
