Kodagu

ಐಗೂರು ಕಸಾಪಕ್ಕೆ ಧ್ವನಿವರ್ಧಕ ಕೊಡುಗೆ

admincoorgdaily

ಐಗೂರು ಕಸಾಪಕ್ಕೆ ಧ್ವನಿವರ್ಧಕ ಕೊಡುಗೆ

ಸೋಮವಾರಪೇಟೆ: ತಾಲ್ಲೂಕಿನ ಐಗೂರು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಿತಿಯ ವತಿಯಿಂದ ಧ್ವನಿವರ್ಧಕವನ್ನು ಕೊಡುಗೆಯಾಗಿ ಈಚೆಗೆ ನೀಡಲಾಯಿತು.

ಇತ್ತೀಚೆಗೆ ಕಾಜೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದ ಸಂದರ್ಭ ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆಯಲ್ಲಿ ಉಳಿಕೆಯಾಗಿದ್ದ ಹಣದಲ್ಲಿ ಐಗೂರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಗತ್ಯವಿದ್ದ 15,500 ರೂ ಮೌಲ್ಯದ ಧ್ವನಿವರ್ಧಕವನ್ನು ಹಣಕಾಸು ಸಮಿತಿಯವರು ಖರೀದಿಸಿ ನೀಡಿದರು ಎಂದು ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ತಿಳಿಸಿದರು.

ಈ ಸಂದರ್ಭ ಸಾಹಿತ್ಯ ಪರಿಷತ್ ಹೋಬಳಿ ಗೌರವ ಕಾರ್ಯದರ್ಶಿ ಎಂ.ಟಿ. ಸರಳಕುಮಾರಿ, 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ. ರಾಯ್, ಸಂಚಾಲಕ ಮನೋಜ್ ಮುತ್ತಪ್ಪ, ಕಾರ್ಯದರ್ಶಿ ಡಿ.ಡಿ. ಬೆಳ್ಳಿಯಪ್ಪ ಹಾಗೂ ಸ್ಮರಣ ಸಂಚಿಕೆ ಸಮಿತಿ ಸಂಪಾದಕ ಎಸ್.ಎಂ. ಚಂಗಪ್ಪ ಇದ್ದರು.