ಭಾರತ - ವೆಸ್ಟ್ ಇಂಡೀಸ್ ಪಂದ್ಯದ ಮಧ್ಯೆ ಗ್ಯಾಲರಿಯಲ್ಲಿ 'ಪ್ರೇಮಿಗಳ ಜಗಳ'! : ಯುವಕನಿಗೆ ಯುವತಿಯಿಂದ ಎರಡು ಬಾರಿ ಕಪಾಳಮೋಕ್ಷ – ವಿಡಿಯೋ ವೈರಲ್
admincoorgdaily
Bruhhh ......😄😂
— chakr (@chkrdhr_) October 13, 2025
What he might have said ? #INDvsWI pic.twitter.com/73rIxdPAbw
ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಐದನೇ ದಿನಕ್ಕೆ ಕಾಲಿಟ್ಟಿದ್ದು, ವಿಂಡೀಸ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಆಲೌಟ್ ಆಗಿದೆ. ಜಯ ಸಾಧಿಸಲು ಭಾರತ ತಂಡಕ್ಕೆ 121 ರನ್‌ಗಳ ಗುರಿ ನಿಗದಿಯಾಗಿದೆ. ಪಂದ್ಯ ತನ್ನ ಅಂತಿಮ ಹಂತವನ್ನು ತಲುಪುತ್ತಿದ್ದಂತೆ, ಮೈದಾನದ ಗ್ಯಾಲರಿಯಲ್ಲಿ ನಡೆದ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ದೆಹಲಿ ಟೆಸ್ಟ್‌ನ ನಾಲ್ಕನೇ ದಿನದಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಕೋಪಗೊಂಡ ಯುವತಿ ಯುವಕನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ವೀಡಿಯೊ ದೃಶ್ಯಗಳಿಂದ ನೋಡಿದಾಗ ಇಬ್ಬರೂ ಪರಸ್ಪರ ಪ್ರೇಮಿಗಳಂತೆ ಕಂಡುಬರುತ್ತಾರೆ. ಯುವಕನ ಯಾವುದೋ ಚೇಷ್ಟೆಗೆ ಪ್ರತಿಕ್ರಿಯೆಯಾಗಿ ಯುವತಿ ಹೊಡೆದಂತಿದ್ದು, ಘಟನೆ ತಮಾಷೆಯ ಮನೋಭಾವದಲ್ಲೇ ನಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
Bruhhh ......😄😂
— chakr (@chkrdhr_) October 13, 2025
What he might have said ? #INDvsWI pic.twitter.com/73rIxdPAbw
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದ್ದು, ಹಲವು ಏಕಾಂಗಿಗಳು ನಾವ್ಯಾವಾಗ ಈ ರೀತಿ ಜಗಳವಾಡುವುದು ಎಂದು ಪ್ರಶ್ನಿಸಿದ್ದಾರೆ.