ಕೊಳಕೇರಿಯ ಕಲಿಯಂಡ ಐನ್ ಮನೆಗೆ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ
ನಾಪೋಕ್ಲು:ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೊಳಕೇರಿಯಲ್ಲಿರುವ ಕಲಿಯಂಡ ಐನ್ ಮನೆಗೆ ಭಾನುವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಈ ಭಾಗದ ಹಲವು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗೂ ಪರಿಶೀಲನೆಯ ಪ್ರವಾಸದಲ್ಲಿದ್ದ ಶಾಸಕರು, ಕಲಿಯಂಡ ಐನ್ ಮನೆ ಪ್ರಮುಖರ ವಿಶೇಷ ಆಹ್ವಾನದ ಮೇರೆಗೆ ಭೇಟಿ ನೀಡಿ ಹಲವು ವಿಷಯಗಳನ್ನು ಐನ್ ಮನೆಯ ಪ್ರಮುಖರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಐನ್ ಮನೆ ಅಧ್ಯಕ್ಷರು, ಕುಟುಂಬದ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.