ಯುವಜನತೆಯೊಂದಿಗೆ ಕೈ ಜೋಡಿಸಿ ದೇಶದ ಉನ್ನತಿಗಾಗಿ ಶ್ರಮಿಸಲು ಶಾಸಕ ಎಎಸ್ ಪೊನ್ನಣ್ಣ ಕರೆ
admincoorgdaily

ಮಡಿಕೇರಿ:United kodava organization ಹಾಗೂ ಮುರ್ನಾಡು ಕೊಡವ ಸಮಾಜದವರ ಜಂಟಿ ಆಶ್ರಯದಲ್ಲಿ ನೆರವೇರಿದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು.
ಮೂರ್ನಾಡು ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜನಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಶಾಸಕರು, ದೇಶಪ್ರೇಮ ಹಾಗೂ ದೇಶದಲ್ಲಿನ ಒಗ್ಗಟ್ಟು ಕೇವಲ ಸ್ವಾತಂತ್ರ್ಯ ದಿನಾಚರಣೆಯ ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನವೂ ದೇಶದ ಏಳಿಗೆ ಬಗ್ಗೆ ಚಿಂತಿಸ ಬೇಕು ಎಂದು ಕರೆ ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಎಲ್ಲಾ ಪ್ರಮುಖರನ್ನು ಸ್ಮರಿಸುವುದರೊಂದಿಗೆ ಅವರು ಹಾಕಿಕೊಟ್ಟ ತಳಹದಿಯಲ್ಲಿ ನಾವು ಮುಂದುವರಿಯಬೇಕು. ದೇಶವನ್ನು ಸದೃಢ ಹಾಗೂ ಸಮೃದ್ಧಶೀಲ ದೇಶವನ್ನಾಗಿ ಮಾಡಲು ಎಲ್ಲಾ ಯುವಜನತೆಯೊಂದಿಗೆ ಎಲ್ಲರೂ ಕೈಜೋಡಿಸಿ ದೇಶದ ಉನ್ನತಿಗಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ United kodava organization ಅಧ್ಯಕ್ಷರಾದ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ಮೂರ್ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ತೆಲಪಂಡ ಸುಬ್ಬಯ್ಯ, ಮಡಿಕೇರಿ ಶಾಸಕರಾದ ಮಂತರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಎಲ್ಲಾ ಕೊಡವ ಸಮಾಜದ ಅಧ್ಯಕ್ಷಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.