ಕೊಡವ ಲೆದರ್ ಬಾಲ್ ಫೈನಲ್ ಪಂದ್ಯಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

Apr 26, 2026 - 16:54
 0  126
ಕೊಡವ ಲೆದರ್ ಬಾಲ್ ಫೈನಲ್ ಪಂದ್ಯಕ್ಕೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ಗೋಣಿಕೊಪ್ಪ;ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.

ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾಟ ಇದಾಗಿದ್ದು, ಗೋಣಿಕೊಪ್ಪಲುವಿನ ಕಾವೇರಿ ಕಾಲೇಜ್ ಮೈದಾನದಲ್ಲಿ ಪಂದ್ಯಾಟವು ನಡೆಯುತ್ತಿದೆ. ಪಂದ್ಯಾಟದಲ್ಲಿ ಭಾಗವಹಿಸಿದ ತಂಡಗಳಿಗೆ ಶುಭ ಕೋರಿ ಮಾತನಾಡಿದ ಶಾಸಕರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಲೆದರ್ಬಾಲ್ ಕ್ರಿಕೆಟ್ ಪ್ರತಿಭೆಗಳು ಕೊಡಗಿನಿಂದಲೂ ಖ್ಯಾತಿಗಳಿಸಿರುವುದು ಹೆಮ್ಮೆಯ ವಿಷಯ. ಅವರನ್ನೆಲ್ಲ ಮಾದರಿಯನ್ನಾಗಿಸಿಕೊಂಡು ಕ್ರೀಡೆಯಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಿ ಯಶಸ್ಸು ಗೊಳ್ಳಬೇಕೆಂದು ಕಿವಿಮಾತು ಹೇಳಿದರು.

 ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಕೂರ್ಗ್ ಕ್ರಿಕೆಟ್ ಫೌಂಡೇಶನ್ ಅಧ್ಯಕ್ಷರು ಚೇರಂಡ ಕಿಶನ್ ಮಾದಪ್ಪ, ಚೀಫ್ ಎಲೆಟ್ರಿಕಲ್ ಆಫೀಸರ್ ತಿತೀರ ರೋಷನ್ ಅಪ್ಪಚ್ಚು, ಬಾಳೆಯಾಡ ಕರುಣ್ ಕಾಳಪ್ಪ, ಸುನಿಲ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0