ಪಂದ್ಯಂಡ ನೂತನ್ ಐನ್ ಮನೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

May 1, 2026 - 10:21
 0  170
ಪಂದ್ಯಂಡ ನೂತನ್ ಐನ್ ಮನೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ವಿರಾಜಪೇಟೆ: ತಾಲೂಕಿನ ಬೊಳ್ಳುಮಾಡು ಗ್ರಾಮಕ್ಕೆ, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

ಬೊಳ್ಳುಮಾಡು ಗ್ರಾಮದ ಪಂದ್ಯಂಡ ಐನ್ ಮನೆಯನ್ನು ನೂತನವಾಗಿ ನಿರ್ಮಿಸಲು, ಐನ್ ಮನೆ ಪ್ರಮುಖರ ಕೋರಿಕೆಯಂತೆ ಶಾಸಕರ ಅನುದಾನ ಹಾಗೂ ವೈಯಕ್ತಿಕ ಅನುದಾನ ಒದಗಿಸಿದ್ದು, ಸದ್ರಿ ಕಾಮಗಾರಿಯನ್ನು ಆರಂಭಿಸಲು  ಶಾಸಕರು ಇಂದು ಭೂಮಿ ಪೂಜೆ ನೆರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಪಂದ್ಯಂಡ ಕುಟುಂಬದ ಪಟ್ಟೆದಾರರು ಪೆಮ್ಮಯ್ಯ, ಡಾಲ ಪೂವಣ್ಣ, ರವಿ ಮಾದಪ್ಪ, ಸುಬ್ರಮಣಿ, ಅಜ್ಜಿಕುಟ್ಟಿರ ಪೊನ್ನು, ಬಟ್ಟಕಾಳ್ಳಂಡ ರಾಜ, ಮಂಜುನಾಥ್ ಹಾಗೂ ಪಂದ್ಯಂಡ ಕುಟುಂಬಸ್ಥರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0