ವಿರಾಜಪೇಟೆ-ಕೊಟ್ಟೋಳಿ- ಕೆದಮುಳ್ಳೂರು-ಪಾಲಂಗಾಲ ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ‌ಚಾಲನೆ

Nov 22, 2025 - 16:41
 0  400
ವಿರಾಜಪೇಟೆ-ಕೊಟ್ಟೋಳಿ- ಕೆದಮುಳ್ಳೂರು-ಪಾಲಂಗಾಲ  ರಸ್ತೆ ಕಾಮಗಾರಿಗೆ ಶಾಸಕ ಎಎಸ್ ಪೊನ್ನಣ್ಣ ‌ಚಾಲನೆ

ವಿರಾಜಪೇಟೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿರಾಜಪೇಟೆ ತಾಲೂಕಿನ ಮುಖ್ಯ ಸಂಪರ್ಕ ರಸ್ತೆ ಆದ ವಿರಾಜಪೇಟೆ-ಕೊಟ್ಟೋಳಿ- ಕೆದಮುಳ್ಳೂರು-ಪಾಲಂಗಾಲ ಅಭಿವೃದ್ಧಿ ಕಾಮಗಾರಿಗೆ ಮಾನ್ಯ ಶಾಸಕರು ₹1ಕೋಟಿ 30ಲಕ್ಷ ರೂ ಒದಗಿಸಿದ್ದು, ಕಾಮಗಾರಿಗೆ ಭೂಮಿ ಪೂಜೆಯನ್ನು ಮಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ಕೊಟ್ಟೋಳಿಯ ಅಂಗನವಾಡಿ ಕೇಂದ್ರ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಈ ಸಾಲಿನಲ್ಲಿ ವಿಪರೀತ ಹಾಗೂ ಅಕಾಲಿಕ ಮಳೆ ಆಗುತ್ತಿರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೊಂಚ ತೊಡಕು ಉಂಟಾಗಿದೆ. ಮಳೆ ಸಂಪೂರ್ಣ ದೂರ ಆದಂತೆ ಪ್ರತಿಯೊಂದು ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆಯಲಿದ್ದು, ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್, ಕೆ ಡಿ ಪಿ ಸದಸ್ಯರು ಮಳೆಟೀರ ಪ್ರಶಾಂತ್ ಉತ್ತಪ್ಪ, ಪಂಚಾಯಿತಿ ಅಧ್ಯಕ್ಷರು ಜೇಫ್ರಿ ಚಂಗಪ್ಪ, ಪಂಚಾಯಿತಿ ಸದಸ್ಯರು ಇಸ್ಮಾಯಿಲ್, ಪವಿತ್ರ, ವನಿತಾ, ತಯಮ್ಮ, ಬೂತ್ ಅಧ್ಯಕ್ಷರು ವಿಜಯ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಎಮ್ ವೈ ಆಲಿ, ಪಲೇಕಂಡ ಅಯ್ಯಣ್ಣ, ಬೇಲ್ಲು ಬೋಪಯ್ಯ, ಹರೀಶ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ. ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0