Kodagu

ಐರಿ ಸಮಾಜದ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

ಐರಿ ಸಮಾಜದ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ; ಕೊಡಗು ಐರಿ ಸಮಾಜದವರು ಆಯೋಜಿಸಿದ ಶಿಲನ್ಯಾಸ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ಅಪ್ಪಚ್ಚಂಡ ಉತ್ತಪ್ಪ ಸಭಾಂಗಣ, ಐರಿ ಸಮಾಜ ಸಮುದಾಯ ಭವನದ ಕಟ್ಟಡಕ್ಕೆ ಅರಮೇರಿಯಲ್ಲಿರುವ ಸಮುದಾಯದ ನಿವೇಶನದಲ್ಲಿ, ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಈಗಾಗಲೇ ಸರಕಾರ ಹಾಗೂ ಶಾಸಕರ ಅನುದಾನದ ₹ 25 ಲಕ್ಷಗಳಲ್ಲಿ ಈ ಕಾಮಗಾರಿಗಳು ಆಗಲಿದ್ದು, ಐರಿ ಸಮಾಜದ ಭವ್ಯ ಸಮುದಾಯ ಭವನ ನಿರ್ಮಾಣವಾಗಿ ಇದರ ಸದ್ಬಳಕೆ ಮಾಡುವುದರೊಂದಿಗೆ ಉತ್ತಮವಾದ ಸಮುದಾಯ ಭವನವನ್ನು ನಿರ್ಮಿಸಿ ಇದರ ಉಪಯೋಗ ಸಮುದಾಯದ ಎಲ್ಲರಿಗೂ ದೊರಕುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಐರಿ ಸಮಾಜದ ಅಧ್ಯಕ್ಷರು ಮೇಲತಂಡ ರಮೇಶ್, ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.