ನೂತನ ಕಾಂಕ್ರೀಟ್ ರಸ್ತೆಗಳ ಲೋಕಾರ್ಪಣೆ ಗೊಳಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ 3 ನೂತನ ಕಾಂಕ್ರೀಟ್ ರಸ್ತೆಗಳನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಬೊಳ್ಳುಮಾಡುಯಿಂದ ಕಾಕೋಟುಪರಂಬುಗೆ ಹೋಗುವ ರಸ್ತೆ, ಪಾಲಚಂಡ ಐನ್ ಮನೆಗೆ ಹೋಗುವ ರಸ್ತೆ ಹಾಗೂ ಮಂಡೆಪಂಡ ಐನ್ ಮನೆಗೆ ಹೋಗುವ ರಸ್ತೆ ಸೇರಿದಂತೆ ಒಟ್ಟು 24 ಲಕ್ಷ ವೆಚ್ಚದ ರಸ್ತೆಗಳನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಮನಗಂಡು ಈ ರಸ್ತೆಯನ್ನು ನಿರ್ಮಿಸಿ ಕೊಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವುದರೊಂದಿಗೆ, ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಕಾಲೋನಿಗೆ ಭೇಟಿ, ದೇವಸ್ಥಾನಕ್ಕೆ ಪೂಜೆ: ಬಳಿಕ ಸ್ಥಳೀಯ ನಿವಾಸಿಯ ಕೋರಿಕೆ ಮೇರೆಗೆ ಅಲ್ಲಿನ ಕಾಲೋನಿಗೆ ಭೇಟಿ ನೀಡಿದ ಶಾಸಕರು, ಕಾಲೋನಿಯ ಪರಿಸ್ಥಿತಿಯನ್ನು ಅವಲೋಕಿಸಿ ನಿವಾಸಿಗಳೊಂದಿಗೆ ಮಾತನಾಡಿದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಬಳಿಕ ಸ್ಥಳೀಯ ಗ್ರಾಮಸ್ಥರು ನಿರ್ಮಿಸಿದ ಮಾದೇರಪ್ಪ ದೇವಸ್ಥಾನಕ್ಕೆತೆರಳಿ ಪೂಜೆ ಸಲ್ಲಿಸಿದರು.
ವಲಯ ಅಧ್ಯಕ್ಷ ಬಟ್ಟಕಾಳಂಡ ರಾಜ ದಿನೇಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಘಟಕದ ಅಧ್ಯಕ್ಷ ರಫೀಕ್, ನಾಸಿರ್, ಬೂತ್ ಅಧ್ಯಕ್ಷ ಪಾಲಚಂಡ ಸುರೇಶ್, ಮದಂಡ ಅರುಣ್,, ಮುಂಡಾಂಡ ಅನಿಲ್, ಚೋಟೆರ ರಮೇಶ್, ಸಚಿನ್ ಕುಟ್ಟಪ್ಪ, ದಿನೇಶ್, ಬಂಟರ ಲೀಲಾದಾರ ರೈ, ಚೀಯಂಡಿರ ಲೋಕೇಶ್ ಮದಯ್ಯ, ಲವ, ಕೂತಂಡ ಅನಿಲ್ ಪೂವಣ್ಣ, ಮಾತಂಡ ಪ್ರಕಾಶ್, ಚರ್ಮಂಡ ಪೊನ್ನಪ್ಪ, ಕಾಮೇಯಂಡ ಹರೀಶ್, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ---
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
