Kodagu

ಹಿರಿಯ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಅವರ ಆರೋಗ್ಯ ವಿಚಾರಿಸಿದ ಶಾಸಕ ಎಎಸ್ ಪೊನ್ನಣ್ಣ

admincoorgdaily

ಹಿರಿಯ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಅವರ ಆರೋಗ್ಯ ವಿಚಾರಿಸಿದ ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ: ಕಡಂಗ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರಾದ ಕೆ.ಎ ಇಬ್ರಾಹಿಂ ಉಂಬಯಿ ರವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ತಿಳಿದ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಆಸ್ಪತ್ರೆಗೆ ತೆರಳಿ ಶ್ರೀಯುತರ ಆರೋಗ್ಯವನ್ನು ವಿಚಾರಿಸಿದರು.

 ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸಿದ ಮಾನ್ಯ ಶಾಸಕರು, ವೈದ್ಯರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೊಡೀರ ವಿನೋದ್ ನಾಣಯ್ಯ, ಐತ್ತಿತಂಡ ಪ್ರಕಾಶ್, ಮೊಹಮ್ಮದ್, ಸುಬೈರ್ ರವರು ಉಪಸ್ಥಿತರಿದ್ದರು.