ವಿ.ಬಾಡಗದಲ್ಲಿ ಕ್ರೀಡಾ ತರಬೇತಿ ಕೇಂದ್ರದ ಸ್ಥಳ ವೀಕ್ಷಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ:ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ವಿಶೇಷ ಕಾಳಜಿಯಿಂದ ವಿ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ವೀಕ್ಷಣೆಯನ್ನು ಶಾಸಕರು ಕೈಗೊಂಡು ಕಾಮಗಾರಿಗಳನ್ನು ಪರಿಶೀಲಿಸಿದರು. ಸ್ಥಳೀಯ ಕ್ರೀಡಾ ಪ್ರತಿಭೆಗಳ ಅನುಕೂಲಕ್ಕೆಂದು ಈ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು, ಶಾಸಕರು ಈ ಕಾಮಗಾರಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪರಿಶೀಲನೆ ಹಾಗು ರೂಪುರೇಶದ ಬಗ್ಗೆ ಚರ್ಚೆ ಬಳಿಕ ಮಾತನಾಡಿದ ಶಾಸಕರು, ಗುಣಮಟ್ಟದ ಕ್ರೀಡಾಂಗಣ ಅತಿ ಶೀಘ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಲಭ್ಯವಾಗುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜ್, ವಿರಾಜಪೇಟೆ ಹಾಗೂ ಪೊನಂಪೇಟೆ ತಹಶೀಲ್ದಾರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರಾದ ಕಂಜಿತಂಡ ಪೂವಣ್ಣ, ಗಿಣಿ ಮೊಣ್ಣಪ್ಪ, ಕೊಂಗಂಡ ಕಾಶಿ ಕಾರ್ಯಪ್ಪ, ಗಿರೀಶ್ ಮುದ್ದಯ್ಯ, ದವನ್ ದೇವಯ್ಯ, ಪ್ರಕಾಶ್ ಪೂವಯ್ಯ,ಕುಂದಚೀರ ಮಂಜು ದೇವಯ್ಯ, ಅಯೂಬ್, ಮೊದಲಾದವರು ಉಪಸ್ಥಿತರಿದ್ದರು.