4ಕೋಟಿ 75ಲಕ್ಷ ವೆಚ್ಚದ ಕಡಂಗ-ಚೆಯ್ಯಂಡಾಣೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

Nov 7, 2025 - 18:33
 0  515
4ಕೋಟಿ 75ಲಕ್ಷ ವೆಚ್ಚದ ಕಡಂಗ-ಚೆಯ್ಯಂಡಾಣೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ತಾಕಡಂಗ ಭಾಗಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಕಡಂಗ-ಚೆಯ್ಯಂಡಾಣೆ ಸಂಪರ್ಕಿಸುವ ಈ ಮುಖ್ಯ ರಸ್ತೆ, ಮಳೆಯಿಂದ ಹಾನಿಗೀಡಾಗಿದ್ದು ಶಾಸಕರ ವಿಶೇಷ ಅನುದಾನದಲ್ಲಿ ರೂ 4ಕೋಟಿ 75ಲಕ್ಷದ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರದಲ್ಲೇ ಕಾಮಗಾರಿಯು ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಸುಗಮ ಸಂಚಾರ/ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಮಾನ್ಯ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರು ಮಾಳೆಟೀರ ಪ್ರಶಾಂತ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ನರಿಯಂದಡ ಗ್ರಾಮ ಅಧ್ಯಕ್ಷರು ಕೌಶಿಕ್ ಕಾವೇರಮ್ಮ, ಉಪಾಧ್ಯಕ್ಷರು ಹಾಗೂ ವಲಯ ಅಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಶೈಲಾ ಕುಟ್ಟಪ್ಪ, ವಾಣಿ, ಪ್ರಕಾಶ್, ಸುಬೀರ್, ಮಮ್ಮಾದ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಪಕ್ಷದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0